ಹೊಚ್ಚ ಹೊಸ ಮಹೀಂದ್ರಾ ಥಾರ್ ರಾಕ್ಸ್ 5-ಡೋರ್ ಎಸ್‌ಯುವಿ ಆಕರ್ಷಕವಾದ ವಿನ್ಯಾಸವನ್ನು ಹೊಂದಿದೆ. ನವೀನ ಶೈಲಿಯ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು, ಸಿ-ಆಕಾರಕ್ಕೆ ಹೋಲುವ ಎಲ್‌ಇಡಿ ಡಿಆರ್‌ಎಲ್‌ಗಳು, ಸರ್ಕ್ಯೂಲರ್ ಫಾಗ್ ಲೈಟ್‌ಗಳು, ಅತ್ಯುತ್ತಮ ಬಂಪರ್, ವಿನೂತನವಾಗಿರುವ ಗ್ರಿಲ್‌ನ್ನು ಒಳಗೊಂಡಿದೆ. ಇದರೊಟ್ಟಿಗೆ ಡುಯಲ್-ಟೋನ್ ಅಲಾಯ್ ವೀಲ್‌ಗಳು, ಟೈಲ್‌ಗೇಟ್-ಮೌಂಟೆಡ್ ಸ್ಪೇರ್ ವೀಲ್ ಮತ್ತು ಎಲ್ಇಡಿ ಟೈಲ್‌ಲೈಟ್‌ಗಳನ್ನು ಪಡೆದಿದೆ. ನೂತನ ಮಹೀಂದ್ರಾ ಥಾರ್ ರಾಕ್ಸ್ 5-ಡೋರ್ ಎಸ್‌ಯುವಿ ರೂಪಾಂತರಗಳಾದ ಎಂಎಕ್ಸ್1 ಪೆಟ್ರೋಲ್ ಎಂಟಿ ಆರ್‌ಡಬ್ಲ್ಯೂಡಿ ರೂ.12.99 ಲಕ್ಷ, ಎಂಎಕ್ಸ್1 ಡೀಸೆಲ್ ಎಂಟಿ ಆರ್‌ಡಬ್ಲ್ಯೂಡಿ ರೂ.13.99 ಲಕ್ಷ, ಎಂಎಕ್ಸ್3 ಪೆಟ್ರೋಲ್ ಎಟಿ ಆರ್‌ಡಬ್ಲ್ಯೂಡಿ ರೂ.14.99 ಲಕ್ಷ, ಎಂಎಕ್ಸ್3 ಡೀಸೆಲ್ ಎಂಟಿ ಆರ್‌ಡಬ್ಲ್ಯೂಡಿ 15.99 ಲಕ್ಷ, ಎಎಕ್ಸ್3ಎಲ್ ಡೀಸೆಲ್ ಎಂಟಿ ಆರ್‌ಡಬ್ಲ್ಯೂಡಿ ರೂ.16.99 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ.
~PR.156~ED.70~##~