ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಹುಲಿಹೈದರ್ ಗ್ರಾಮದಲ್ಲಿ ನೀರನ ಮೌನ ಮುಂದುವರೆದಿದೆ. ಘರ್ಷಣೆಗೆ ಪೊಲೀಸರು ಹಾಗೂ ಸ್ಥಳೀಯ ಶಾಸಕರೇ ಕಾರಣ ಎಂದು ಕಾಂಗ್ರೆಸ್ ಪಕ್ಷದ ದಲಿತ ಮುಖಂಡ ಮುಕುಂದರಾವ್ ಭವಾನಿ ಮಠ ಆರೋಪಿಸಿದ್ದಾರೆ. ರಾಜಕೀಯಕ್ಕಾಗಿಯೇ ಎರಡು ಕಗ್ಗೊಲೆ ನಡೆದಿವೆ. ಎರಡು ಪಕ್ಷದವರು ಶಾಮೀಲಾಗಿದ್ದಾರೆ. ಗಂಗಾವತಿ ಹಾಗೂ ಕನಕಗಿರಿಯಲ್ಲಿ ಶಾಸಕರಿಗೆ ಪೊಲೀಸರು ಹಣ ಕೊಟ್ಟು ಬಂದಿದ್ದಾರೆ. ಹಣ ವಸೂಲಿ ಮಾಡೋಕೆ ಅವರಿಗೆ ಸಮಯ ಇಲ್ಲ, ಹೀಗಾಗಿ ಕನಕಗಿರಿ ಮತ್ತು ಗಂಗಾವತಿಯಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ದುಡ್ಡಿನ ಬೆನ್ನು ಹತ್ತಿರೋದೆ ಇದಕ್ಕೆಲ್ಲ ಕಾರಣ, ಸ್ಥಳೀಯ ಶಾಸಕರು ಪೊಲೀಸರ ಬಳಿ ದುಡ್ಡು ತಗೆದುಕೊಂಡಿದ್ದು ಇದಕ್ಕೆ ಹೊಣೆ ಎಂದು ಗಂಭೀರ ಆರೋಪ ಮಾಡಿದ್ರು.. ಈ ಆರೋಪದ ನಡುವೆಯೂ ಹುಲಿಹೈದರ್ ಗ್ರಾಮಕ್ಕೆ ಸ್ಥಳೀಯ ಶಾಸಕ ಬಸವರಾಜ್ ದಡೇಸಗೂರು, ಡಿಸಿ ಸುಂದರೇಶ್ ಬಾಬು ಭೇಟಿ ನೀಡಿದರು. ಮೃತ ಕುಟುಂಬಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.
MLA Basavaraj Dadesugur and DC Sundaresh Babu Visit Hulihaidar Village In Koppal
#publictv
Watch Live Streaming On http://www.publictv.in/live