Commonwealth Games 2022: ಈವರೆಗೆ ಭಾರತಕ್ಕೆ 16 ಚಿನ್ನ, 12 ಬೆಳ್ಳಿ, 17 ಕಂಚಿನ ಪದಕ..!

2022-08-07 156

ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಪದಕ ಬೇಟೆ ಜೋರಾಗಿದೆ. ಇವತ್ತು ಒಂದೇ ದಿನ ಭಾರತಕ್ಕೆ 3 ಚಿನ್ನ 1 ಬೆಳ್ಳಿ, 4 ಕಂಚಿನ ಪದಕ ಒಲಿದಿದೆ. ಬಾಕ್ಸಿಂಗ್‍ನ 48 ಕೆ.ಜಿ ಮಹಿಳಾ ವಿಭಾಗದಲ್ಲಿ ನೀತು ಗಂಗಾಸ್ & 48-51 ಕೆಜಿ ಪುರುಷರ ವಿಭಾಗದಲ್ಲಿ ಅಮಿತ್ ಪಂಘಾಲ್ ಸ್ವರ್ಣಕ್ಕೆ ಮುತ್ತಿಟ್ಟಿದ್ದಾರೆ. ಪುರುಷರ ತ್ರಿಬಲ್ ಜಂಪ್‍ನಲ್ಲಿ ಎಲ್ಡೋಸ್ ಪೌಲ್ ಚಿನ್ನ ಗೆದ್ದಿದ್ರೆ, ಅಬ್ದುಲ್ಲಾ ಅಬೂಬಕರ್ ಬೆಳ್ಳಿ ಪದಕ ಗೆದ್ದಿದ್ದಾರೆ. ವನಿತೆಯರ ಹಾಕಿ ವಿಭಾಗದಲ್ಲಿ ಕಂಚಿನ ಪದಕ್ಕೆ ನಡೆದ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ 2-1 ಶೂಟ್‍ಔಟ್‍ನಿಂದ ಜಯಸಾಧಿಸಿದೆ. ಪುರುಷರ 10 ಸಾವಿರ ಮೀ. ರೇಸ್ ವಾಕ್‍ನಲ್ಲಿ ಸಂದೀಪ್ ಕುಮಾರ್ & ಜಾವೆಲಿನ್ ಥ್ರೋನಲ್ಲಿ ಅನ್ನುರಾಣಿಗೆ ಕಂಚಿನ ಪದಕ ಒಲಿದಿದೆ. ಒಟ್ಟು ಕಾಮನ್‍ವೆಲ್ತ್ ಗೇಮ್ಸ್‍ನಲ್ಲಿ ಭಾರತ ಇದುವರೆಗೆ 16 ಚಿನ್ನ, 12 ಬೆಳ್ಳಿ, 17 ಕಂಚಿನ ಪದಕ ಗೆದ್ದಿದ್ದು, ಒಟ್ಟು 45 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ.

#publictv #commonwealthgames2022

Free Traffic Exchange