Mangaluru Cops Name Their Canine Staff After Rakshit Shetty-starrer 777 Charlie

2022-06-12 3

ರಕ್ಷಿತ್ ಶೆಟ್ಟಿ ಅಭಿನಯದ ಚಾರ್ಲಿ 777 ರಿಲೀಸ್ ಆಗಿದೆ. ಚಾರ್ಲಿ ಪಾತ್ರದಾರಿ ಶ್ವಾನ ಎಲ್ಲರ ಮನಸ್ಸನ್ನು ಗೆದ್ದಿದೆ.ಈ ಚಿತ್ರದ ಪ್ರಭಾವದಿಂದ ಮಂಗಳೂರಿನ ಶ್ವಾನದಳದ ಪುಟ್ಟ ನಾಯಿಮರಿಗೆ ಚಾರ್ಲಿ ಅಂತ ನಾಮಕರಣ ಮಾಡಲಾಗಿದೆ.
ಇನ್ನು ಚಿಕ್ಕಬಳ್ಳಾಪುರದಲ್ಲಿ ಚಾರ್ಲಿಗೆ ಸಿಕ್ಕಾಪಟ್ಟೆ ಫ್ಯಾನ್ಸ್ ಇದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಅಭಿಮಾನಿಗಳ ಸಂಘ ಹುಟ್ಟಿಕೊಂಡಿದೆ. ನಗರದ ಬಾಲಾಜಿ ಚಿತ್ರಮಂದಿರದಲ್ಲಿ 777 ಚಾರ್ಲಿ ಸಿನಿಮಾ ಭರ್ಜರಿ ಪ್ರದರ್ಶನ ಕಾಣ್ತಿದ್ದು. ಬಾಲಾಜಿ ಚಿತ್ರಮಂದಿರದ ಬಳಿ ಚಾರ್ಲಿ ಅಭಿಮಾನಿಗಳ ಸಂಘ ಅಂತ ಬ್ಯಾನರ್ ಹಾಕಿ ಚಿತ್ರ ಶತದಿನೋತ್ಸವ ಆಚರಿಸಲಿ ಅಂತ ಶುಭ ಹಾರೈಸಿದ್ದಾರೆ. ಇನ್ನೂ ಈ ಬ್ಯಾನರ್‍ನಲ್ಲಿ ಚಾರ್ಲಿಯ ಬೃಹತ್ ಫೋಟೋ ಜೊತೆಗೆ ವಿವಿಧ ಶ್ವಾನಗಳ ಫೋಟೋಗಳನ್ನು ಹಾಕಲಾಗಿದೆ.ಈ ಬ್ಯಾನರ್, ಪೋಟೋ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿದ್ದು..ಜನ ಚಾರ್ಲಿಯ ಅಭಿಮಾನಿಗಳ ಸಂಘಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

#publictv #charlie777 #mangalurucitypolice