ಮತ್ತೊಂದು ಜ್ಞಾನವಾಪಿ ಆಗುತ್ತಾ ಮಂಡ್ಯದ ಜಾಮಿಯಾ ಮಸೀದಿ ಅನ್ನೋ ಪ್ರಶ್ನೆಗಳು ಶುರುವಾಗಿದೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿರುವ ಜಾಮಿಯಾ ಮಸೀದಿ ವಿರುದ್ಧ ಭಜರಂಗದಳ ಮುಖಂಡರು ಕಾನೂನು ಹೋರಾಟ ಆರಂಭಿಸಿದ್ದಾರೆ. ಮಂಡ್ಯ ಡಿಸಿ, ಮುಜರಾಯಿ, ಪುರಾತತ್ವ ಇಲಾಖೆ ಆಯುಕ್ತರು, ವಕ್ಫ್ ಬೋರ್ಡ್ ಆಯುಕ್ತರಿಗೆ ಭಜರಂಗದಳದ ಪರ ವಕೀಲರು ಲೀಗಲ್ ನೋಟಿಸ್ ಕೊಟ್ಟಿದ್ದಾರೆ. 10 ಪುಟಗಳ 20 ಅಂಶಗಳನ್ನೊಂಡ ನೋಟಿಸ್ ನೀಡಿದ್ದು, 30 ದಿನಗಳಲ್ಲಿ ಉತ್ತರಿಸಲು ಕೋರಲಾಗಿದೆ. ಇಲ್ಲದಿದ್ದಲ್ಲಿ ಹೈಕೋರ್ಟ ಮೊರೆ ಹೋಗಲು 1001 ಹಿಂದೂ ಕಾರ್ಯಕರ್ತರು ಸಿದ್ಧತೆ ನಡೆಸಿದ್ದಾರೆ. ಪ್ರಧಾನಿ ಮೋದಿ, ಸಿಎಂ ಬೊಮ್ಮಾಯಿಗೂ ಅದರ ಪ್ರತಿ ಸಲ್ಲಿಕೆಯಾಗಿದೆ.
#PublicTV #JamiaMosque