ನಾಳೆ ಕೇತುಗ್ರಸ್ಥ ಚಂದ್ರಗ್ರಹಣ..! Total Lunar Eclipse 2022

2022-05-15 1

ನಾಳೆ ಅಂದರೆ ಮೇ 16ರಂದು ಕೇತುಗ್ರಸ್ಥ ಚಂದ್ರಗ್ರಹಣ ಸಂಭವಿಸಲಿದೆ. ಇದು ಭಾರತದಲ್ಲಿ ಗೋಚರ ಇಲ್ಲದಿದ್ದರೂ ಪರಿಣಾಮ ಇದ್ದೇ ಇರುತ್ತೆ. ಚಂದ್ರನ ದಕ್ಷಿಣ ಭಾಗ ಪ್ರಕಾಶಮಾನವಾಗಿರುತ್ತೆ. ಸಾಮಾನ್ಯ ದಿನಕ್ಕಿಂತ ಚಂದ್ರ 12ರಷ್ಟು ದೊಡ್ಡದಾಗಿ ಕಾಣಿಸ್ತಾನೆ. ಭಾರತೀಯ ಕಾಲಮಾನ ಪ್ರಕಾರ ನಾಳೆ ಬೆಳಗ್ಗೆ 7 ಗಂಟೆ 2 ನಿಮಿಷಕ್ಕೆ ಗ್ರಹಣದ ಆರಂಭ ಕಾಲವಾದರೆ ಮಧ್ಯಾಹ್ನ 12 ಗಂಟೆ 20 ನಿಮಿಷಕ್ಕೆ ಗ್ರಹಣದ ಅಂತ್ಯಕಾಲವಾಗಿದೆ. ನಾಳೆ ಬರೋಬ್ಬರಿ 5 ಗಂಟೆ 22 ನಿಮಿಷಗಳ ಕಾಲ ಚಂದ್ರನಿಗೆ ಗ್ರಹಣ ಹಿಡಿಯಲಿದೆ. ಚಂದ್ರಗಹಣವಾದ್ದರಿಂದ ಮನಸ್ಸು ಚಂಚಲ, ಮನಸ್ಸು ವಿಚಲಿತಗೊಳ್ಳುವುದು ಸಾಮಾನ್ಯವಾಗಿರಲಿದೆ. ಅಲ್ಲದೇ ರಾಜಕೀಯ ವಲಯದಲ್ಲಿ ಕೋಲಾಹಲವೇ ಎಳಬಹುದಾಗಿದೆ. ಇನ್ನು ಚಂದ್ರಗ್ರಹಣದ ಸಮಯದಲ್ಲಿ ಚಂದ್ರನು ವೃಶ್ಚಿಕ ರಾಶಿಯಲ್ಲಿ ಇರುತ್ತಾನೆ. ವೃಶ್ಚಿಕ ರಾಶಿಯನ್ನು ಜ್ಯೋತಿಷ್ಯದಲ್ಲಿ ನೀರಿನ ಅಂಶದ ಚಿಹ್ನೆ ಎಂದು ಹೇಳಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಗ್ರಹಣದ ನಂತರ ವಾತಾವರಣದಲ್ಲಿ ಬದಲಾವಣೆಯಾಗಲಿದೆ. ಗ್ರಹಣದ ಸಮಯದಲ್ಲಿ, ಶನಿ ಮತ್ತು ಮಂಗಳ ಇಬ್ಬರೂ ಕುಂಭ ರಾಶಿಯಲ್ಲಿ ಒಟ್ಟಿಗೆ ಇರುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಗುಡುಗು ಮತ್ತು ಚಂಡಮಾರುತವಾಗುವ ಇರುತ್ತೆ ಅನ್ನೋದು ಜ್ಯೋತಿಷ್ಯ ಶಾಸ್ತ್ರದ ಅಭಿಮತವಾಗಿದೆ.

#PublicTV #LunarEclipse2022 #AnandGuruji

Free Traffic Exchange