ಜೇಮ್ಸ್ ಕಲೆಕ್ಷನ್ ಬಗ್ಗೆ ಅಚ್ಚರಿಯ ಮಾಹಿತಿ ಬಿಚ್ಚಿಟ್ಟ ನಿರ್ಮಾಪಕ ಕಿಶೋರ್

2022-03-19 207

'ಜೇಮ್ಸ್' ಸಿನಿಮಾದ ಒಟ್ಟಾರೆ ಕಲೆಕ್ಷನ್ ಅನ್ನು ಬಿಚ್ಚಿಡೋದು ಕಷ್ಟವೇ ಸರಿ. ಇದೀಗ 'ಜೇಮ್ಸ್' ಸಿನಿಮಾದ ನಿರ್ಮಾಪಕ ಕಿಶೋರ್ ಪಾತಿಕೊಂಡ ಈ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಖಾಸಗಿ ಮಾಧ್ಯಮದ ಸಂದರ್ಶನವೊಂದರಲ್ಲಿ ಕಲೆಕ್ಷನ್ ಬಗ್ಗೆ ಮಾತನಾಡಿರುವ ಅವರು 'ಜೇಮ್ಸ್' ಲೆಕ್ಕಾಚಾರವನ್ನು ಬಿಚ್ಚಿಡಲು ಈಗಲೇ ಸಾಧ್ಯವಿಲ್ಲ ಎಂದಿದ್ದಾರೆ. ಆದರೆ ಮೊದಲೆರಡು ದಿನದಲ್ಲೇ 'ಜೇಮ್ಸ್' ವಿಶ್ವದಾದ್ಯಂತ 100 ಕೋಟಿ ಕ್ಲಬ್ ಸೇರಿರಬಹುದಾ ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ. 100 ಕೋಟಿ ಕ್ಲಬ್ ಸೇರಿದ್ರೂ, ಸೇರಿರಬಹುದು ಎಂದು ಹೇಳಿದ್ದಾರೆ. ಅತ್ತ 100 ಕೋಟಿ ಕಲೆಕ್ಷನ್ ವಿಚಾರವನ್ನು ತಳ್ಳಿಯೂ ಹಾಕದೇ, ಇತ್ತ ಒಪ್ಪಿಯೂ ಕೊಳ್ಳದ ಕಿಶೋರ್ ಆದಷ್ಟು ಬೇಗ ಸಿನಿಮಾದ ಕಲೆಕ್ಷನ್ ಬಗ್ಗೆ ತಿಳಿಸುತ್ತೇನೆ ಎಂದಿದ್ದಾರೆ.

Puneeth Rajkumar James film producer kishore pathikonda talks about movie collection.