Mixed Reaction For High Court's Verdict On 'Hijab' Issue At Bagalkote

2022-03-16 4

ರಾಜ್ಯದಲ್ಲಿ ಭಾರೀ ತಲ್ಲಣ ಸೃಷ್ಟಿಸಿದ್ದ ಹಿಜಬ್ ವಿವಾದ ಸಂಬAಧ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಆದ್ರೆ ಹೈಕೋರ್ಟ್ ತೀರ್ಪಿನ ಬಗ್ಗೆ ಬಾಗಲಕೋಟೆಯ ವಿದ್ಯಾರ್ಥಿಗಳು ಪರ-ವಿರೋಧ ಮಾತುಗಳನ್ನಾಡಿದ್ದಾರೆ. ಕೆಲ ವಿದ್ಯಾರ್ಥಿಗಳು ಕೋರ್ಟ್ ಆದೇಶಕ್ಕೆ ನಾವು ಗೌರವ ಕೊಡ್ತೇವೆ.. ಹಿಜಬ್ ತೆಗೆದು ತರಗತಿಯಲ್ಲಿ ಕುಳಿತುಕೊಳ್ತೇವೆ ಅಂದ್ರೆ, ದ್ವಿತಿಯ ಪಿಯೂಸಿಯಲ್ಲಿ ವ್ಯಾಸಂಗ ಮಾಡ್ತಿರೋ ತಸ್ಮಿಯಾ ಎಂಬ ವಿದ್ಯಾರ್ಥಿನಿ, ಹೈಕೋರ್ಟ್ ತೀರ್ಪಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾಳೆ. ಅಷ್ಟೇ ಅಲ್ಲ, ಹಿಂದೂ ವಿದ್ಯಾರ್ಥಿನಿಯರು ಇಡುವ ಕುಂಕುಮದ ಬಗ್ಗೆ ಪ್ರಶ್ನೆ ಮಾಡಿದ್ರೆ ಹೇಗಿರುತ್ತೆ ಎಂದು ವಿವಾದದ ಮಾತುಗಳನ್ನಾಡಿದ್ದಾಳೆ.. ಬನ್ನಿ ವಿದ್ಯಾರ್ಥಿನಿ ತಸ್ಮೀಯಾ ಪಬ್ಲಿಕ್ ಟಿವಿ ಜೊತೆ ಏನೆಲ್ಲ ಮಾತನಾಡಿದ್ದಾಳೆ ಅನ್ನೋದನ್ನ ನೋಡೋಣ..

#PublicTV #Bagalkote #HijabVerdict