ಇಂದು ಪುನೀತ್ ರಾಜ್‌ಕುಮಾರ್ ನಟನೆಯ ಕೊನೆ ಸಿನಿಮಾ ಜೇಮ್ಸ್ ಪ್ರಿ ರಿಲೀಸ್ ಇವೆಂಟ್ ಅದ್ಧೂರಿಯಾಗಿ ನಡೆಯಲಿದೆ. ಇದಕ್ಕಾಗಿ ಅರಮನೆ ಮೈದಾನದಲ್ಲಿ ಭರ್ಜರಿ ಸಿದ್ಧತೆ ಮಾಡಲಾಗಿದೆ. ಸುಮಾರು 10 ಸಾವಿರ ಅಭಿಮಾನಿಗಳು ಒಟ್ಟಿಗೆ ಸೇರಿ ಕಾರ್ಯಕ್ರಮ ವೀಕ್ಷಿಸಲು ಅವಕಾಶ ಮಾಡಿಕೊಡಲಾಗಿದೆ. ಅದಕ್ಕೂ ಮಿಗಿಲಾಗೇ ಅಭಿಮಾನಿಗಳು ಸೇರುವ ನಿರೀಕ್ಷೆಯೂ ಇದೆ. ಅಪ್ಪು ಸ್ಥಾನದಲ್ಲಿ ಅಪ್ಪು ಅರ್ಧಾಂಗಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಆಗಮನ ಬಹಳ ವಿಶೇಷವಾಗಿ ಗಮನ ಸೆಳೆಯಲಿದೆ. ಕಾರ್ಯಕ್ರಮದ ಮಾಹಿತಿಯನ್ನ ಅಶ್ವಿನಿಯವರು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಪ್ಪು ಅನುಪಸ್ಥಿತಿಯಲ್ಲಿ ಜೇಮ್ಸ್ ಚಿತ್ರಕ್ಕೆ ರಾಯಭಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವವರು ಶಿವಣ್ಣ ಸೇರಿ ದೊಡ್ಮನೆ ಕುಟುಂಬ ಕಾರ್ಯಕ್ರಮಕ್ಕೆ ಸಾಕ್ಷಿ ಆಗಲಿದೆ. ಇತ್ತ ನಿನ್ನೆ ನಡೆದ ಭಾರತ - ಶ್ರೀಲಂಕಾ 2ನೇ ಟೆಸ್ಟ್ ಪಂದ್ಯದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಜಕುಮಾರ ಸಾಂಗ್ ಮೂಲಕ ಅಪ್ಪು ಭಜನೆ ನಡೆದಿದೆ. ಕಿಚ್ಚ ಸುದೀಪ್ ಕೂಡ ಅಪ್ಪು ಫೋಟೋ ಜೊತೆ ಅಭಿಮಾನಿಯೊಂದಿಗೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ.