ನವೀನ್ ಸಾವನ್ನಪ್ಪಿದ್ದು ಮರೆಯಲಾಗದ ಘಟನೆ, ಅಮೆರಿಕಾ, ಸೌದಿ, ಜರ್ಮನಿಯಂತೆ ಭಾರತೀಯ ರಾಯಭಾರಿ ಕಚೇರಿ ಸ್ವಲ್ಪ ಮುಂಚಿತವಾಗಿ ಎರ್ಮಜೆನ್ಸಿ ಅಲರ್ಟ್ ಕೊಟ್ಟಿದ್ರೆ ಅವನು ಉಳಿಯುತ್ತಿದ್ದ, ಬೇರೆ ದೇಶಗಳ ವಿದ್ಯಾರ್ಥಿಗಳಂತೆ ಮುಂಚೆಯೇ ಭಾರತವೂ ನಮ್ಮನ್ನು ಸ್ಥಳಾಂತರ ಮಾಡಬಹುದಿತ್ತೇನೋ.. ಹೀಗಂತ ಉಕ್ರೇನ್‌ನಲ್ಲಿ ಸಾವನ್ನಪ್ಪಿದ ವಿದ್ಯಾರ್ಥಿ ನವೀನ್ ನೆನೆದು ಬೆಂಗಳೂರು ಮೂಲದ ವಿದ್ಯಾರ್ಥಿನಿ ಅಂಕಿತಾ ಕಣ್ಣೀರಿಟ್ಟಿದ್ದಾರೆ. ಇಂದು ದೆಹಲಿ ತಲುಪಿದ ವಿದ್ಯಾರ್ಥಿನಿ ಅಂಕಿತಾ ಖಾರ್ಕೀವ್‌ನಲ್ಲಿ ನಡೆದ ಹತ್ತಾರು ಕಹಿ ಘಟನೆಗಳನ್ನು ಪಬ್ಲಿಕ್ ಟಿವಿ ಜೊತೆಗೆ ಹಂಚಿಕೊAಡಿದ್ದಾರೆ.
#PublicTV #Ukraine #India #Russia