ಶಿಕಾರಿಪುರದ ಜನರ ಋಣವನ್ನು ಈ ಜನ್ಮದಲ್ಲಿ ಅಲ್ಲ, ಮುಂದಿನ ಜನ್ಮದಲ್ಲೂ ತೀರಿಸಲು ಸಾಧ್ಯವಿಲ್ಲ: BS Yediyurappa

2022-03-05 3

ಶಿಕಾರಿಪುರದ ರೈತಾಭಿಮಾನ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮಾತನಾಡಿದ್ದು, ಇದು ಅಪರೂಪದ, ವಿಶೇಷವಾದ ಕಾರ್ಯಕ್ರಮ. ಇವತ್ತು ನನಗೆ ಅತ್ಯಂತ ಸಂತೋಷ ತಂದಿರುವ ಸುದಿನ. ಎಲ್ಲಿಂದಲೋ ಬಂದ ನನಗೆ ಶಿಕಾರಿಪುರದ ಜನ ಅಧಿಕಾರ ಕೊಟ್ಟಿದ್ದಾರೆ. ಶಿಕಾರಿಪುರದ ಜನರ ಋಣವನ್ನು ಈ ಜನ್ಮದಲ್ಲಿ ಅಲ್ಲ, ಮುಂದಿನ ಜನ್ಮದಲ್ಲೂ ತೀರಿಸಲು ಸಾಧ್ಯವಿಲ್ಲ. ಬಜೆಟ್ ಅಧಿವೇಶನ ನಂತರ ರಾಜ್ಯದಲ್ಲಿ ಪ್ರವಾಸ ಮಾಡ್ತೇನೆ. ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ತರುವ ಸಂಕಲ್ಪ ಮಾಡ್ತೇನೆ. ಕಾಂಗ್ರೆಸ್ ನಾಯಕರು ಅಧಿಕಾರಕ್ಕೆ ಬರುವ ಹಗಲು ಕನಸು ಕಾಣುತ್ತಿದ್ದಾರೆ. ಸಾಮೂಹಿಕ ನಾಯಕತ್ವದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ. ಬಜೆಟ್ ಮೇಲಿನ ಅಂಶವನ್ನೇ ಮುಂದಿಟ್ಟುಕೊಂಡು ರಾಜ್ಯದ ಜನರ ಮುಂದೆ ಹೋಗುತ್ತೇನೆ ಎಂದಿದ್ದಾರೆ.

#PublicTV #BSYediyurappa #Shikaripur