ನವೀನ್ ಬೇರೆಯವರಿಗೆ ಸಹಾಯ ಮಾಡಲು ಹೋಗಿ ತನ್ನ ಪ್ರಾಣವನ್ನು ಪಣಕ್ಕಿಡಬೇಕಾಯ್ತು: Dr. Dhananjay
#PublicTV #DrDhananjay
ಪೋಲೆಂಡ್ ತಲುಪಿದ ೨೦ ಕನ್ನಡಿಗರ ಗುಂಪು. ನನ್ನ ಮಗ ರೋಹನ್ ಖಾರ್ಕಿವ್ ನಿಂದ ಹೊರಟು ಕೀವ್ ನಗರ ದಾಟಿ ಈಗ ಉಕ್ರೇನ್ ಗಡಿ ಪ್ರದೇಶಕ್ಕೆ ಹೋಗಿದ್ದಾನೆ. ರೋಹನ್ ಮತ್ತು ೨೦ ಜನರ ಟೀಂ ಪೋಲೆಂಡ್ ಮೂಲಕ ಭಾರತಕ್ಕೆ ಬರುತ್ತಾರೆ. ಉಕ್ರೇನ್ ಗೆ ಪೋಲ್ಯಾಂಡ್ ಬಹಳ ಹತ್ತಿರದ ದೇಶ ಮತ್ತು ಅಲ್ಲಿ ಎಮಿಗ್ರೇಶನನ್ನು ಬಹಳ ವೇಗವಾಗಿ ಮಾಡಲಾಗುತ್ತಿದೆ.
ಏರ್ಲಿಫ್ಟ್ ಆಗೋದಕ್ಕೆ ಪೋಲ್ಯಾಂಡ್ ಉತ್ತಮ ದೇಶ ಅನ್ನೋ ಕಾರಣಕ್ಕೆ ಅಲ್ಲಿಗೆ ಸುಮಾರು ೨೦ ಕನ್ನಡಿಗರ ಗುಂಪು ಹೋಗಿದೆ. ಫ್ಲೈಟ್ ಕೆಪಾಸಿಟಿ ಫುಲ್ ಆಗುವವರೆಗೆ ಪೋಲೆಂಡ್ ಗಡಿಯಲ್ಲಿ ಕಾಯಬೇಕಾಗುತ್ತದೆ. ಭಾರತೀಯರು ಒಟ್ಟಾದ ನಂತರ ವಿಮಾನ ಪೋಲೆಂಡಿಂದ ಭಾರತಕ್ಕೆ ಹಾರಲಿದೆ. ಕಳೆದ ನಾಲ್ಕು ದಿನಗಳಿಂದ ಬಹಳ ಕಷ್ಟದ ಜೀವನವನ್ನು ರೋಹನ್ ಮತ್ತು ಗೆಳೆಯರು ಕಳೆದಿದ್ದಾರೆ. ಊಟ ಮತ್ತು ನೀರಿಗೂ ಕೂಡ ಬಹಳ ಸಮಸ್ಯೆ ಇತ್ತು ಬ್ರೆಡ್ ಚಾಕೊಲೆಟ್ ತಿಂದು ಹಸಿವು ನೀಗಿಸಿದ್ದಾರೆ. ಉಕ್ರೇನ್ ನಲ್ಲಿ ಇಂಟರ್ನೆಟ್ ಸಮಸ್ಯೆ ಕಾಡುತ್ತಿತ್ತು ನನ್ನ ಮಗ ದಿನದಲ್ಲಿ ಆಗಾಗ ವಾಯ್ಸ್ ಮೆಸೇಜ್ ಗಳನ್ನು ವಾಟ್ಸಪ್ ಮೂಲಕ ಹಾಕುತ್ತಿದ್ದ . ಇಂಟರ್ನೆಟ್ ಸಿಕ್ಕಾಗ ಸಂದೇಶಗಳು ನನ್ನ ಮೊಬೈಲ್ ಗೆ ಬರುತ್ತಿತ್ತು. ನಮ್ಮ ಸಂದೇಶ ಕೂಡಾ ಇಂಟರ್ನೆಟ್ ಸಿಕ್ಕಾಗ ತಲುಪಿವೆ. ರೋಹನ್ ಬಿಸ್ಕೆಟ್, ಬ್ರೆಡ್ಡು, ನೀರು ಕುಡಿದು ಮೂರು ದಿನ ಹಸಿವು ನೀಗಿಸಿದ್ದಾರೆ ಜೊತೆಗೆ ಜೀವ ಭಯ ಇತ್ತು. ಕುಟುಂಬದ ಬಗ್ಗೆ ಟೆನ್ಶನ್ ಇತ್ತು. ಉಡುಪಿಯಲ್ಲಿ ಪಬ್ಲಿಕ್ ಟಿವಿಗೆ ಡಾ. ಧನಂಜಯ ಹೇಳಿಕೆ
ಹಾವೇರಿಯ ನವೀನ್ ಕಳೆದ ವರ್ಷದವರೆಗೂ ನನ್ನ ಮಗನ ರೂಂಮೇಟ್ ಆಗಿದ್ದ. ಹಾಸ್ಟೆಲ್, ಕಾಲೇಜು, ಉಕ್ರೇನ್ ನಲ್ಲಿ ಜೊತೆ ಜೊತೆಗೆ ಓಡಾಡಿಕೊಂಡಿದ್ದರು. ನವೀನ್ ಗೆ ಭಾರತಕ್ಕೆ ಬರುವ ಅವಕಾಶ ಇದ್ದರೂ ತನ್ನ ಜೂನಿಯರ್ಸ್ ಗಳ ರಕ್ಷಣೆಯಾಗಿ ನಿಂತಿದ್ದಾನೆ. ದುರ್ಘಟನೆಯಿಂದ ನಮಗೆ ಬಹಳ ದುಃಖವಾಗಿದೆ. ನವೀನ್ ತಂದೆ-ತಾಯಿಯ ದುಃಖ ನಮಗೆ ಅರ್ಥ ಆಗುತ್ತದೆ. ನವೀನ್ ಬೇರೆಯವರಿಗೆ ಸಹಾಯ ಮಾಡಲು ಹೋಗಿ ತನ್ನ ಪ್ರಾಣವನ್ನು ಪಣಕ್ಕಿಡಬೇಕಾಯ್ತು. ನವೀನ್ ಆಪ್ತ ಗೆಳೆಯ ರೋಹನ್ ತಂದೆ ಡಾ.ಧನಂಜಯ್ ಕಣ್ಣೀರು. ಉಡುಪಿಯ ಕೃಷಿ ವಿಜ್ಞಾನಕೇಂದ್ರದ ಮುಖ್ಯಸ್ಥನಾಗಿರುವ ಡಾ.ಧನಂಜಯ್
Watch Live Streaming On http://www.publictv.in/live