ಪ್ರತಿಭಟನೆ ನಡೆಸಿದ ಮುಸ್ಲಿಂ ವಿದ್ಯಾರ್ಥಿನಿಯರೇ ಹಿಜಾಬ್ ವಿವಾದಕ್ಕೆ ಕಾರಣ ಎಂದು ಬಿಂಬಿಸಲಾಗುತ್ತಿದೆ. ಆದರೆ, ಸ್ಥಳೀಯರು ಹಾಗೂ ಇಲ್ಲಿನ ರಾಜಕಾರಣಿಗಳ ಮಾತನ್ನು ಆಲಿಸಿದರೆ, ವಿವಾದದ ಹಿಂದಿನ ಉದ್ದೇಶಗಳು ಮನದಟ್ಟಾಗುತ್ತವೆ. ಭವಿಷ್ಯದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ತೆಗೆದು ಅಥವಾ ಧರಿಸಿ ಶಾಲಾ–ಕಾಲೇಜಿಗೆ ಬರುವಂತಾದರೂ, ಅದರಿಂದ ನಾವೆಲ್ಲರೂ ಸಾಧಿಸಿದ್ದಾದರೂ ಏನು ಎಂಬ ಪ್ರಶ್ನೆಯನ್ನು ನಾವೇ ಕೇಳಿಕೊಳ್ಳಬೇಕಾಗುತ್ತದೆ. ನಾಳೆ ಇದೇ ವಿದ್ಯಾರ್ಥಿ–ವಿದ್ಯಾರ್ಥಿನಿಯರು ಅದೇ ಶಾಲಾ–ಕಾಲೇಜಿಗೆ ಹೋಗಬೇಕು, ಅಲ್ಲಿ ಇವರು ಹಿಂದೂ–ಇವರು ಮುಸ್ಲಿಂ ಎಂದು ವಿಂಗಡಿಸಿ ನೋಡುವಂತಹ ಪರಿಸ್ಥಿತಿಯ ಸೃಷ್ಟಿಗೆ ಹೊಣೆ ಯಾರು?
#karnataka #Politics #HijabControversy #Education #Hijab #Protest