ಅತಿಥಿ ಉಪನ್ಯಾಸಕರ ಮುಷ್ಕರ: ವಿದ್ಯಾರ್ಥಿಗಳಿಂದ ಬೆಂಬಲ

2022-01-04 11

ಅತಿಥಿ ಉಪನ್ಯಾಸಕರ ಮುಷ್ಕರ: ವಿದ್ಯಾರ್ಥಿಗಳಿಂದ ಬೆಂಬಲ

ಬೆಂಗಳೂರು: ಡಿ. 10ರಿಂದ ತರಗತಿ ಬಹಿಷ್ಕರಿಸಿ ಸೇವಾ ಭದ್ರತೆ ಮತ್ತು ಕಾಯಂಗೆ ಆಗ್ರಹಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕರು ನಡೆಸುತ್ತಿರುವ ಪ್ರತಿಭಟನೆ ಮುಂದುವರೆದಿದೆ.

ಈ ನಡುವೆ ವಿದ್ಯಾರ್ಥಿಗಳು ಅತಿಥಿ ಉಪನ್ಯಾಸಕರ ಬೆಂಬಲಕ್ಕೆ ನಿಂತಿದ್ದಾರೆ. ಈ ಹಿನ್ನೆಲೆಯಲ್ಲಿ ಕೆ.ಜಿ.ಆರ್.ಮಲ್ಲಿಕಾರ್ಜುನ ಅವರು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಂಡಿದ್ದು, ಉನ್ನತ ಶಿಕ್ಷಣ ಸಚಿವರೇ, ಅಧಿಕಾರಿಗಳೇ, ಕಣ್ಣು, ಕಿವಿ ಬಿಟ್ಕೊಂಡು ವಿದ್ಯಾರ್ಥಿಗಳೇ ಸ್ವಯಂ ಪ್ರೇರಿತರಾಗಿ ಬೀದಿಗಿಳಿದಿದ್ದಾರೆ. ಒಮ್ಮೆ ಕೇಳಿ ನೋಡಿ ಹೇಗಿದೆ ಅವರ ಆರ್ಭಟ. ಇವರು ಮತ ಯಾಚಿಸುತ್ತಿಲ್ಲ ಅವರಿಗೆ ಪಾಠ ಮಾಡುತ್ತಿರುವ ಗುರುಗಳ ಹಸಿವಿಗಾಗಿ, ಅನ್ನಕ್ಕಾಗಿ, ಶೋಷಣೆಯ ವಿರುದ್ಧವಾಗಿ ಸಿಡಿದೆದ್ದು ನಿಂತಿದ್ದಾರೆ. ಒಮ್ಮೆ ನೋಡಿ ಅವರ ಘರ್ಜನೆಯನ್ನು. ಅತಿಥಿ ಉಪನ್ಯಾಸಕ ಬಂಧುಗಳೇ ದಯವಿಟ್ಟು ವಿಡಿಯೋ share ಮಾಡಿ ಅತಿ ಹೆಚ್ಚು share ಮಾಡಿ ಸ್ನೇಹಿತರೆ ಎಂದು ಮನವಿ ಮಾಡಿದ್ದಾರೆ.

#GuestFaculty #ಅತಿಥಿಉಪನ್ಯಾಸಕರು #ಸರ್ಕಾರಿಪ್ರಥಮದರ್ಜೆಕಾಲೇಜು #malgudinews #news #TOPNEWS

Videos similaires