Kiccha Sudeep Donates 2.5 Lakh To The Kin Of His Die Hard Fan
ಕಿಚ್ಚ ಸುದೀಪ್ ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟ ಅಭಿಮಾನಿಗಾಗಿ ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ.
ಕಿಚ್ಚ ಸುದೀಪ್ ಅಭಿಮಾನಿ ಸಂಘದ ತುಮಕೂರು ಜಿಲ್ಲಾ ಮಾಜಿ ಉಪಾಧ್ಯಕ್ಷರಾಗಿದ್ದ ಪುನೀತ್ ಶನಿವಾರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಈ ವಿಷಯ ತಿಳಿದ ಕಿಚ್ಚ ಸುದೀಪ್ ಅವರು ತಮ್ಮ ಅಭಿಮಾನಿಯ ಬಗ್ಗೆ ಟ್ವೀಟ್ ಮಾಡಿದ್ದಾರೆ
ಟ್ವೀಟ್‍ನಲ್ಲಿ ಏನಿದೆ?
ಪುನೀತ್ ಆರ್ಯ ಸಾವಿನ ಸುದ್ದಿ ಕೇಳಿ ಆಘಾತವಾಗಿದೆ. ಈ ಅದ್ಭುತ ಆತ್ಮ ಇನ್ನಿಲ್ಲ ಎಂದು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಲವು ವರ್ಷಗಳಿಂದ ಪುನೀತ್ ನನ್ನ ಅಭಿಮಾನಿ ಹಾಗೂ ಸಹೋದರರಾಗಿದ್ದರು. ಬಹಳ ಬೇಸರವಾಗುತ್ತಿದೆ. ನಾನು ಪುನೀತ್‍ರನ್ನು ಮಿಸ್ ಮಾಡಿಕೊಳ್ಳುತ್ತೇನೆ ಎಂದು ಬರೆದುಕೊಳ್ಳುವ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ.
Very disheartening n unable to accept tat this Wondeful soul is no more..
He's been a fan n a brother to me for years. Very very sad.
He Wil be missed.
ಆಗಿದ್ದೇನು?
ಶನಿವಾರ ರಾತ್ರಿ ತುಮಕೂರಿನ ಹನುಮಂತಪುರದ ಪಂಜಾಬಿ ಡಾಬಾ ಬಳಿ ಪು-ನೀತ್ ಬೈಕ್ ನಿಯಂತ್ರಣ ತಪ್ಪಿ ತಡೆಗೋಡೆಗೆ ಡಿಕ್ಕಿ ಹೊಡೆದಿತ್ತು. ಅಪಘಾತ ಬಳಿಕ ಪುನೀತ್ ಇಬ್ಬರು ಸ್ನೇಹಿತರಿಗೆ ಫೋನ್ ಮಾಡಿದ್ದರು. ಆದರೆ ತಡರಾತ್ರಿಯಾಗಿದ್ದರಿಂದ ಇಬ್ಬರು ಸ್ನೇಹಿತರು ಫೋನ್ ರಿಸೀವ್ ಮಾಡಿಲ್ಲ. ಕೊನೆಗೆ ಅಪಘಾತದಲ್ಲಿ ತೀವ್ರ ರಕ್ತ ಸ್ರಾವದಿಂದ ನಿತ್ರಾಣಗೊಂಡು ಸ್ಥಳದಲ್ಲೇ ಪುನೀತ್ ಮೃತಪಟ್ಟಿದ್ದರು.
For latest updates on film news subscribe our channel.
Subscribe on YouTube: www.youtube.com/publicmusictv
Like us @ https://www.facebook.com/publicmusictv
Follow us @ https://twitter.com/publicmusictv