ಯಮಹಾ ಕಂಪನಿಯು ತನ್ನ ಬಹುನಿರೀಕ್ಷಿತ 2022ರ ವೈಝಡ್‌ಎಫ್ ಆರ್7 ಸೂಪರ್‌ಸ್ಪೋರ್ಟ್ ಬೈಕ್ ಅನ್ನು ಜಾಗತಿಕವಾಗಿ ಅನಾವರಣಗೊಳಿಸಿದೆ. ಮಧ್ಯಮ ತೂಕದ ಈ ಹೊಸ ಬೈಕ್ ಈಗ ಸ್ಥಗಿತಗೊಂಡಿರುವ ವೈಝಡ್‌ಎಫ್ ಆರ್6 ಬೈಕಿನ ಬದಲಿಗೆ ಬಿಡುಗಡೆಯಾಗಲಿದೆ.
ಹೊಸ ವೈಝಡ್‌ಎಫ್ ಆರ್7 ಬೈಕ್ ಅನ್ನು ಟೀಮ್ ಯಮಹಾ ಬ್ಲೂ ಹಾಗೂ ಪರ್ಫಾರ್ಮೆನ್ಸ್ ಬ್ಲ್ಯಾಕ್ ಎಂಬ ಎರಡು ಬಣ್ಣಗಳಲ್ಲಿ ಮಾರಾಟ ಮಾಡಲಾಗುತ್ತದೆ. ಈ ಹೊಸ ಬೈಕಿನ ಬೆಲೆ 8,999 ಅಮೆರಿಕನ್ ಡಾಲರ್'ಗಳಾಗಿದೆ. ಅಂದರೆ ಭಾರತೀಯ ರೂಪಾಯಿ ಮೌಲ್ಯದಲ್ಲಿ ರೂ.6.60 ಲಕ್ಷಗಳಾಗಿದೆ.
ಹೊಸ ಯಮಹಾ ವೈಝಡ್‌ಎಫ್ ಆರ್7 ಬೈಕಿನಲ್ಲಿ 689 ಸಿಸಿ ಲಿಕ್ವಿಡ್-ಕೂಲ್ಡ್, 4-ಸ್ಟ್ರೋಕ್, ಡಿಒಹೆಚ್‌ಸಿ ಇನ್ಲೈನ್ ಟ್ವಿನ್-ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 8,750 ಆರ್‌ಪಿಎಂನಲ್ಲಿ 72.3 ಬಿಹೆಚ್‌ಪಿ ಪವರ್ ಹಾಗೂ 6,500 ಆರ್‌ಪಿಎಂನಲ್ಲಿ 67 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.
ವೋಲ್ವೋ ಕಂಪನಿಯ ಕಾರು ರಿಕಾಲ್ ಬಗೆಗಿನ ಮತ್ತಷ್ಟು ವಿವರಗಳಿಗಾಗಿ ಈ ವೀಡಿಯೊ ನೋಡಿ.