ಎಂಜಿ ಮೋಟಾರ್ ಇಂಡಿಯಾ ಕಂಪನಿಯು ಭಾರತದಲ್ಲಿ ಮಾರಾಟವಾಗುವ ತನ್ನ ಗ್ಲೋಸ್ಟರ್ ಎಸ್‌ಯುವಿಯ ಬೆಲೆಯನ್ನು ಹೆಚ್ಚಿಸಿದೆ. ಮೂಲ ಮಾದರಿಯ ಬೆಲೆಯನ್ನು ಹೊರತುಪಡಿಸಿ ಇತರ ಎಲ್ಲಾ ಮಾದರಿಗಳ ಬೆಲೆಯನ್ನು ಏರಿಕೆ ಮಾಡಲಾಗಿದೆ.
ಕಂಪನಿಯು ಗ್ಲೋಸ್ಟರ್ ಎಸ್‌ಯುವಿಯನ್ನು ರೂ.28.98 ಲಕ್ಷ ಆರಂಭಿಕ ಬೆಲೆಯೊಂದಿಗೆ ಬಿಡುಗಡೆಗೊಳಿಸಿತ್ತು. ಒಂದು ತಿಂಗಳ ನಂತರ ಗ್ಲೋಸ್ಟರ್ ಎಸ್‌ಯುವಿಯ ಬೆಲೆಯನ್ನು ರೂ.29.98 ಲಕ್ಷಗಳಿಗೆ ಹೆಚ್ಚಿಸಲಾಯಿತು.
ಗ್ಲೋಸ್ಟರ್ ಎಸ್‌ಯುವಿಯ ಪ್ರೀಮಿಯಂ ಮಾದರಿಗಳ ಬೆಲೆಯನ್ನು ರೂ.50,000ಗಳಿಂದ ರೂ.80,000ಗಳವರೆಗೆ ಏರಿಕೆ ಮಾಡಲಾಗಿದೆ. ಗ್ಲೋಸ್ಟರ್ ಎಸ್‌ಯುವಿಯನ್ನು ಸೂಪರ್, ಸ್ಮಾರ್ಟ್, ಶಾರ್ಪ್ ಹಾಗೂ ಸ್ಯಾವಿ ಎಂಬ ನಾಲ್ಕು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ.
ಎಂಜಿ ಗ್ಲೋಸ್ಟರ್ ಎಸ್‌ಯುವಿ ಬಗೆಗಿನ ಮತ್ತಷ್ಟು ವಿವರಗಳಿಗಾಗಿ ಈ ವೀಡಿಯೊ ನೋಡಿ.