ಎಂಜಿ ಮೋಟಾರ್ ಕಂಪನಿಯು 2019ರಲ್ಲಿ ಭಾರತದಲ್ಲಿ ಕಾರ್ಯಾಚರಣೆಯನ್ನು ಆರಂಭಿಸಿತು.
ಅಲ್ಪಾ ಅವಧಿಯಲ್ಲಿಯೇ ಎಂಜಿ ಮೋಟಾರ್ ಕಂಪನಿಯ ಕಾರುಗಳು ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದವು. ಎಂಜಿ ಮೋಟಾರ್ ಕಂಪನಿಯು ಭಾರತದಲ್ಲಿ ಹೆಕ್ಟರ್, ಹೆಕ್ಟರ್ ಪ್ಲಸ್, ಝಡ್‌ಎಸ್ ಇವಿ ಸೇರಿದಂತೆ ಮೂರು ವಾಹನಗಳನ್ನು ಮಾರಾಟ ಮಾಡುತ್ತಿದೆ.
ಈಗ ಎಂಜಿ ಮೋಟಾರ್ ಕಂಪನಿಯು ಭಾರತದಲ್ಲಿ ಮಾರಾಟವಾಗುವ ತನ್ನ ಕಾರುಗಳ ಬೆಲೆಯನ್ನು ಹೆಚ್ಚಿಸಿದೆ. ಎಂಜಿ ಹೆಕ್ಟರ್‌ನ ಸ್ಟೈಲ್, ಸೂಪರ್, ಸ್ಮಾರ್ಟ್ ಹಾಗೂ 1.5 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರುವ ಶಾರ್ಪ್ ಮಾದರಿಗಳ ಬೆಲೆಯನ್ನು ರೂ.28,000ಗಳವರೆಗೆ ಹೆಚ್ಚಿಸಲಾಗಿದೆ.
ಎಂಜಿ ಮೋಟಾರ್ ಕಾರುಗಳ ಬೆಲೆ ಏರಿಕೆ ಬಗೆಗಿನ ಮತ್ತಷ್ಟು ವಿವರಗಳಿಗಾಗಿ ಈ ವೀಡಿಯೊ ನೋಡಿ.