ಮರ್ಸಿಡಿಸ್ ಬೆಂಝ್ ಕಂಪನಿಯು ತನ್ನ ಬಹುನಿರೀಕ್ಷಿತ ಎ-ಕ್ಲಾಸ್ ಲಿಮೋಸಿನ್ ಕಾರ್ ಅನ್ನು ಮಾರ್ಚ್ 25ರಂದು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವುದಾಗಿ ತಿಳಿಸಿದೆ. ಬಿಡುಗಡೆಯಾದ ನಂತರ ಹೊಸ ಮರ್ಸಿಡಿಸ್ ಬೆಂಝ್ ಎ-ಕ್ಲಾಸ್ ಲಿಮೋಸಿನ್ ಕಾರ್ ಅನ್ನು ಎ 200, ಎ 200 ಡಿ ಹಾಗೂ ಎ 35 ಎಎಂಜಿ ಎಂಬ ಮೂರು ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು.
ಈ ಎಲ್ಲಾ ಮೂರು ಮಾದರಿಗಳನ್ನು ಭಾರತದಲ್ಲಿನ ಕಂಪನಿಯ ಉತ್ಪಾದನಾ ಘಟಕದಲ್ಲಿ ಸ್ಥಳೀಯವಾಗಿ ಜೋಡಿಸಲಾಗುವುದು. ಹೊಸ ಮರ್ಸಿಡಿಸ್ ಬೆಂಝ್ ಎ-ಕ್ಲಾಸ್ ಲಿಮೋಸಿನ್ ಕಾರು ಭಾರತದಲ್ಲಿರುವ ಕಂಪನಿಯ ಸಿಎಲ್‌ಎ ಮಾದರಿಯನ್ನು ಬದಲಿಸಲಿದೆ.
ಮರ್ಸಿಡಿಸ್ ಬೆಂಝ್ ಎ-ಕ್ಲಾಸ್ ಲಿಮೋಸಿನ್ ಕಾರಿನ ಬಗೆಗಿನ ಮತ್ತಷ್ಟು ವಿವರಗಳಿಗಾಗಿ ಈ ವೀಡಿಯೊ ನೋಡಿ.