ಟಾಟಾ ಮೋಟಾರ್ಸ್ ಕಂಪನಿಯು ತನ್ನ ಬಹುನಿರೀಕ್ಷಿತ ಸಫಾರಿ ಎಸ್‌ಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಹೊಸ ಟಾಟಾ ಸಫಾರಿ ಎಸ್‌ಯುವಿಯ ಬೆಲೆ ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.14.69 ಲಕ್ಷಗಳಿಂದ ರೂ.21.45 ಲಕ್ಷಗಳಾಗಿದೆ.
ಈ ಎಸ್‌ಯುವಿಯ ಬುಕ್ಕಿಂಗ್'ಗಳು ಈಗಾಗಲೇ ಆರಂಭವಾಗಿದ್ದು, ಶೀಘ್ರದಲ್ಲಿಯೇ ವಿತರಣೆಯನ್ನು ಆರಂಭಿಸಲಾಗುವುದು. ಹೊಸ ಟಾಟಾ ಸಫಾರಿ ಎಸ್‌ಯುವಿಯನ್ನು ಎಕ್ಸ್‌ಇ, ಎಕ್ಸ್‌ಎಂ, ಎಕ್ಸ್‌ಟಿ, ಎಕ್ಸ್‌ಟಿ ಪ್ಲಸ್, ಎಕ್ಸ್ ಝಡ್ ಹಾಗೂ ಎಕ್ಸ್ ಝಡ್ ಪ್ಲಸ್ ಎಂಬ ಆರು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ.
ಈ ಎಸ್‌ಯುವಿಯನ್ನು ಆರು ಅಥವಾ ಏಳು ಸೀಟುಗಳ ಆಯ್ಕೆಯಲ್ಲಿ ಮಾರಾಟ ಮಾಡಲಾಗುತ್ತದೆ. ಟಾಟಾ ಮೋಟಾರ್ಸ್ ಸಫಾರಿ ಎಸ್‌ಯುವಿಯ ಹೊಸ ಅಡ್ವೆಂಚರ್ ಎಡಿಶನ್ ಅನ್ನು ಸಹ ಬಿಡುಗಡೆಗೊಳಿಸಿದೆ.
ಹೊಸ ಟಾಟಾ ಸಫಾರಿ ಎಸ್‌ಯುವಿ ಬಗೆಗಿನ ಮತ್ತಷ್ಟು ವಿವರಗಳಿಗಾಗಿ ಈ ವೀಡಿಯೊ ನೋಡಿ.