ಭಾರತದಲ್ಲಿ 20ನೇ ವರ್ಷಾಚರಣೆಯ ಸಂಭ್ರಮದಲ್ಲಿರುವ ಹೋಂಡಾ ಮೋಟಾರ್‌ಸೈಕಲ್ ಅಂಡ್ ಸ್ಕೂಟರ್ಸ್ ಇಂಡಿಯಾ ಕಂಪನಿಯು ಮಾರಾಟದಲ್ಲಿ ಹೊಸ ಮೈಲಿಗಲ್ಲನ್ನು ಸಾಧಿಸಿರುವುದಾಗಿ ತಿಳಿಸಿದೆ. 2001ರಲ್ಲಿ ಕಾರ್ಯಾಚರಣೆ ಆರಂಭವಾದಾಗಿನಿಂದ ದಕ್ಷಿಣ ಭಾರತದಲ್ಲಿ 1.5 ಕೋಟಿ ಯುನಿಟ್ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿರುವುದಾಗಿ ಕಂಪನಿಯು ಹೇಳಿದೆ.
ದೇಶದ ದಕ್ಷಿಣ ಭಾಗದಲ್ಲಿ ನಂಬರ್ ಒನ್ ದ್ವಿಚಕ್ರ ವಾಹನ ಕಂಪನಿಯಾಗಿರುವುದಕ್ಕೆ ಖುಷಿಯಾಗುತ್ತಿದೆ ಕಂಪನಿ ಪ್ರಕಟಿಸಿದೆ. ಕಂಪನಿಯು ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಪುದುಚೇರಿ ಹಾಗೂ ಅಂಡಮಾನ್‌ಗಳಲ್ಲಿ ತನ್ನ ವಾಹನಗಳನ್ನು ಮಾರಾಟ ಮಾಡುತ್ತದೆ.
ಹೋಂಡಾ ಮೋಟಾರ್‌ಸೈಕಲ್ ಅಂಡ್ ಸ್ಕೂಟರ್ಸ್ ಇಂಡಿಯಾದ ಮೈಲಿಗಲ್ಲಿನ ಬಗೆಗಿನ ಮತ್ತಷ್ಟು ವಿವರಗಳಿಗಾಗಿ ಈ ವೀಡಿಯೊ ನೋಡಿ.