ಎಂಜಿ ಮೋಟಾರ್ ಇಂಡಿಯಾ ಕಂಪನಿಯು ತನ್ನ ಹೆಕ್ಟರ್ ಹಾಗೂ ಹೆಕ್ಟರ್ ಪ್ಲಸ್ ಎಸ್‌ಯುವಿಗಳನ್ನು ಹೊಸ ಎಂಟು-ಸ್ಪೀಡಿನ ಸಿವಿಟಿ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಯುನಿಟ್'ನೊಂದಿಗೆ ಬಿಡುಗಡೆಗೊಳಿಸಿದೆ.
ಹೊಸ ಸಿವಿಟಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಅನ್ನು ಹೆಕ್ಟರ್ ಹಾಗೂ ಹೆಕ್ಟರ್ ಪ್ಲಸ್ ಎಸ್‌ಯುವಿಗಳ ಪೆಟ್ರೋಲ್ ಎಂಜಿನ್‌ಗಳಿಗೆ ಜೋಡಿಸಲಾಗುವುದು. ಇವುಗಳು ಈಗಾಗಲೇ ಮಾರುಕಟ್ಟೆಯಲ್ಲಿರುವ ಡಿಸಿಟಿಯೊಂದಿಗೆ ಲಭ್ಯವಿರಲಿವೆ.
ಸಿವಿಟಿ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್'ಗಳನ್ನು ಹೆಕ್ಟರ್ ಹಾಗೂ ಹೆಕ್ಟರ್ ಪ್ಲಸ್ ಎರಡೂ ಮಾದರಿಗಳ ಸ್ಮಾರ್ಟ್ ಹಾಗೂ ಶಾರ್ಪ್ ಮಾದರಿಗಳಲ್ಲಿ ನೀಡಲಾಗುತ್ತದೆ. ಸಿವಿಟಿ ಹೊಂದಿರುವ ಸ್ಮಾರ್ಟ್ ಮಾದರಿಯ ಬೆಲೆ ರೂ.16.52 ಲಕ್ಷಗಳಾದರೆ, ಶಾರ್ಪ್ ಮಾದರಿಯ ಬೆಲೆ ರೂ.18.10 ಲಕ್ಷಗಳಾಗಿದೆ.
ಹೆಕ್ಟರ್ ಎಸ್‌ಯುವಿಗಳ ಬಗೆಗಿನ ಮತ್ತಷ್ಟು ವಿವರಗಳಿಗಾಗಿ ಈ ವೀಡಿಯೊ ನೋಡಿ.