ಆಲ್ಟ್ರೋಜ್ ಐ-ಟರ್ಬೊ ಕಾರು ಬಿಡುಗಡೆಗೊಳಿಸಿದ ಟಾಟಾ ಮೋಟಾರ್ಸ್

2021-01-23 16,543

ಟಾಟಾ ಆಲ್ಟ್ರೋಜ್ ಐ-ಟರ್ಬೊ ಕಾರು ಇಂದು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಈ ಹೊಸ ಕಾರಿನ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.7.73 ಲಕ್ಷಗಳಾಗಿದೆ.

ಹೊಸ ಆಲ್ಟ್ರೋಜ್ ಐ-ಟರ್ಬೊ ಕಾರು ಸ್ಟಾಂಡರ್ಡ್ ಆಲ್ಟ್ರೋಜ್ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ ಕಾರ್ ಅನ್ನು ಹೋಲುತ್ತದೆ. ಟಾಟಾ ಕಂಪನಿಯು ಈ ಕಾರಿನ ವಿನ್ಯಾಸದಲ್ಲಿ ಯಾವುದೇ ಪ್ರಮುಖ ಬದಲಾವಣೆಗಳನ್ನು ಮಾಡಿಲ್ಲ.

ಸ್ಟಾಂಡರ್ಡ್ ಮಾದರಿಗಿಂತ ವಿಭಿನ್ನವಾಗಿಸಲು ಈ ಕಾರಿನ ಬೂಟ್ ಲಿಟ್ ಕೆಳಗೆ ಐ-ಟರ್ಬೊ ಬ್ಯಾಡ್ಜ್ ಅನ್ನು ಅಳವಡಿಸಲಾಗಿದೆ. ಆಲ್ಟ್ರೋಜ್ ಐ-ಟರ್ಬೊ ಕಾರ್ ಅನ್ನು ಹಾರ್ಪರ್ ಬ್ಲೂ ಬಣ್ಣದಲ್ಲಿಯೂ ಸಹ ಮಾರಾಟ ಮಾಡಲಾಗುತ್ತದೆ.

ಹೊಸ ಆಲ್ಟ್ರೋಜ್ ಐ-ಟರ್ಬೊ ಕಾರಿನ ಬಗೆಗಿನ ಮತ್ತಷ್ಟು ವಿವರಗಳಿಗಾಗಿ ಈ ವೀಡಿಯೊ ನೋಡಿ.

Videos similaires