ಡಸ್ಟರ್, ಟ್ರೈಬರ್, ಕ್ವಿಡ್‌ ಕಾರುಗಳ ಬೆಲೆ ಏರಿಕೆ ಮಾಡಿದ ರೆನಾಲ್ಟ್ ಇಂಡಿಯಾ

2021-01-12 14,562

ಉತ್ಪಾದನಾ ವೆಚ್ಚವು ಏರಿಕೆಯಾದ ಹಿನ್ನೆಲೆಯಲ್ಲಿ ರೆನಾಲ್ಟ್ ಇಂಡಿಯಾ ಕಂಪನಿಯು ಡಸ್ಟರ್, ಟ್ರೈಬರ್ ಹಾಗೂ ಕ್ವಿಡ್‌ ಕಾರುಗಳ ಬೆಲೆಯನ್ನು ಹೆಚ್ಚಿಸಿದೆ. ರೆನಾಲ್ಟ್ ಕ್ವಿಡ್ ಕಾರಿನ ಬೆಲೆಯನ್ನು ರೂ.18,500ಗಳವರೆಗೆ ಹೆಚ್ಚಿಸಲಾಗಿದೆ.

ಬೆಲೆ ಏರಿಕೆಯ ನಂತರ ರೆನಾಲ್ಟ್ ಕ್ವಿಡ್‌ ಕಾರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.3,12,800ಗಳಾದರೆ, ಟಾಪ್-ಎಂಡ್ ಕ್ಲೈಂಬರ್ (ಒ) ಎಎಮ್‌ಟಿ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.5,31,200ಗಳಾಗಿದೆ.

ರೆನಾಲ್ಟ್ ಕ್ವಿಡ್ ಕಾರಿನಲ್ಲಿ ಅಳವಡಿಸಿರುವ 999 ಸಿಸಿ ಮೂರು ಸಿಲಿಂಡರ್ ಪೆಟ್ರೋಲ್ ಎಂಜಿನ್ 5500 ಆರ್ ಪಿಎಂನಲ್ಲಿ 67 ಬಿಹೆಚ್ ಪಿ ಪವರ್ ಹಾಗೂ 4,250 ಆರ್ ಪಿಎಂನಲ್ಲಿ 91 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ರೆನಾಲ್ಟ್ ಇಂಡಿಯಾ ಕಾರುಗಳ ಬಗೆಗಿನ ಮತ್ತಷ್ಟು ವಿವರಗಳಿಗಾಗಿ ಈ ವೀಡಿಯೊ ನೋಡಿ.

Free Traffic Exchange

Videos similaires