ಟ್ರಯಂಫ್ ಮೋಟರ್ ಸೈಕಲ್ಸ್ ಕಂಪನಿಯು ತನ್ನ ಹೊಸ ಟೈಗರ್ 850 ಬೈಕ್ ಅನ್ನು ಜಾಗತಿಕ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ. ಕಂಪನಿಯು ತನ್ನ ಹೊಸ ಎಂಟ್ರಿ ಲೆವೆಲ್ ಅಡ್ವೆಂಚರ್ ಟೂರರ್ ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ.
ಕಂಪನಿಯು ತನ್ನ ಅಧಿಕೃತ ವೆಬ್ ಸೈಟಿನಲ್ಲಿ ಈ ಹೊಸ ಬೈಕಿನ ಬಗ್ಗೆ ಮಾಹಿತಿಯನ್ನು ನೀಡಿದೆ. ಇದರಿಂದಾಗಿ ಈ ಬೈಕ್ ಶೀಘ್ರದಲ್ಲಿಯೇ ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.
ಹೊಸ ಟೈಗರ್ 850 ಬೈಕ್ ಟೈಗರ್ 900 ಬೈಕಿನ ವಿನ್ಯಾಸವನ್ನು ಹೊಂದಿದೆ. ಆದರೆ ಈ ಎರಡೂ ಬೈಕ್ ಗಳಲ್ಲಿ ಹೊಸ ಬಾಡಿ ಗ್ರಾಫಿಕ್ಸ್ ಹಾಗೂ ಹೊಸ ಬಣ್ಣಗಳು ಸೇರಿದಂತೆ ಕೆಲವು ವ್ಯತ್ಯಾಸಗಳಿವೆ.
ಹೊಸ ಟೈಗರ್ 850 ಬೈಕ್ ಬಗೆಗಿನ ಮತ್ತಷ್ಟು ವಿವರಗಳಿಗಾಗಿ ಈ ವೀಡಿಯೊ ನೋಡಿ.