ಮಾರುತಿ ಸುಜುಕಿ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಆನ್‌ಲೈನ್ ಸೇಲ್ಸ್ ಪ್ಲಾಟ್ ಫಾರಂ ಮೂಲಕ 2 ಲಕ್ಷ ಯೂನಿಟ್‌ಗಳನ್ನು ಮಾರಾಟ ಮಾಡಿರುವುದಾಗಿ ತಿಳಿಸಿದೆ. ತನ್ನ ಡಿಜಿಟಲ್ ಚಾನೆಲ್‌ಗಳು ಈಗ ದೇಶಾದ್ಯಂತ 1000ಕ್ಕೂ ಹೆಚ್ಚು ಡೀಲರ್ ಗಳನ್ನು ಹೊಂದಿರುವುದಾಗಿ ಮಾರುತಿ ಸುಜುಕಿ ಕಂಪನಿ ಹೇಳಿದೆ.
2019ರ ಏಪ್ರಿಲ್ ನಿಂದ 2 ಲಕ್ಷ ಯೂನಿಟ್ ಗಳನ್ನು ಆನ್‌ಲೈನ್ ಮೂಲಕ ಮಾರಾಟ ಮಾಡಲಾಗಿದೆ ಎಂದು ಹೇಳಲಾಗಿದೆ. ಮಾರುತಿ ಸುಜುಕಿ ಕಂಪನಿಯು 2017ರಲ್ಲಿ ಆನ್‌ಲೈನ್ ಬುಕ್ಕಿಂಗ್ ಗಳನ್ನು ಆರಂಭಿಸಿತು.
2019ರ ಏಪ್ರಿಲ್ ನಿಂದ 21 ಲಕ್ಷ ಗ್ರಾಹಕರು ಕಂಪನಿಯ ಕಾರುಗಳ ಬಗ್ಗೆ ಆನ್ ಲೈನ್ ಮೂಲಕ ವಿಚಾರಿಸಿದ್ದರೆ, 2 ಲಕ್ಷ ಗ್ರಾಹಕರು ವಾಹನಗಳನ್ನು ಖರೀದಿಸಿದ್ದಾರೆ.
ಮಾರುತಿ ಸುಜುಕಿ ಆನ್‌ಲೈನ್ ಸೇಲ್ಸ್ ಪ್ಲಾಟ್ ಫಾರಂ ಬಗೆಗಿನ ಮತ್ತಷ್ಟು ವಿವರಗಳಿಗಾಗಿ ಈ ವೀಡಿಯೊ ನೋಡಿ.