ಬುಕ್ಕಿಂಗ್ ನಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದ ಥಾರ್ ಎಸ್‌ಯುವಿ

2020-11-05 2

ಮಹೀಂದ್ರಾ ಕಂಪನಿಯ ಹೊಸ ಥಾರ್ ಎಸ್‌ಯುವಿಗೆ ಬೇಡಿಕೆ ಹೆಚ್ಚುತ್ತಿದ್ದು, ಬುಕ್ಕಿಂಗ್ ನಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದೆ. ಈ ಆಫ್-ರೋಡ್ ಎಸ್‌ಯುವಿಯು ಬಿಡುಗಡೆಯಾದ ಕೇವಲ 45 ದಿನಗಳಲ್ಲಿ 20,000ಕ್ಕೂ ಹೆಚ್ಚು ಬುಕ್ಕಿಂಗ್ ಗಳನ್ನು ದಾಖಲಿಸಿದೆ.

ಎರಡೂ ಎಂಜಿನ್ ಆಯ್ಕೆಗಳ ಹಾರ್ಡ್-ಟಾಪ್ ಆಟೋಮ್ಯಾಟಿಕ್ ಹಾಗೂ ಮ್ಯಾನುವಲ್ ಮಾದರಿಗಳನ್ನು ಹೆಚ್ಚಿನ ಸಂಖ್ಯೆಯ ಗ್ರಾಹಕರು ಬುಕ್ ಮಾಡಿದ್ದಾರೆ ಎಂದು ಮಹೀಂದ್ರಾ ಕಂಪನಿ ತಿಳಿಸಿದೆ.

ಬೇಡಿಕೆಯು ಹೆಚ್ಚುತ್ತಿರುವ ಕಾರಣಕ್ಕೆ ಹೊಸ ಥಾರ್ ಎಸ್‌ಯುವಿಯ ವೇಟಿಂಗ್ ಅವಧಿಯು 5ರಿಂದ 7 ತಿಂಗಳವರೆಗೆ ಇರಲಿದೆ.

Videos similaires