ಕಿಯಾ ಮೋಟಾರ್ಸ್ ಇಂಡಿಯಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಸೊನೆಟ್ ಎಸ್‌ಯುವಿಗಾಗಿ 50,000ಕ್ಕೂ ಹೆಚ್ಚು ಬುಕಿಂಗ್ ಗಳನ್ನು ಸ್ವೀಕರಿಸಿರುವುದಾಗಿ ಘೋಷಿಸಿದೆ. ಸೊನೆಟ್ ಎಸ್‌ಯುವಿಯ ಪ್ರೀ ಲಾಂಚ್ ಬುಕ್ಕಿಂಗ್ ಗಳನ್ನು ಆಗಸ್ಟ್ 20ರಂದು ಆರಂಭಿಸಲಾಗಿತ್ತು.
ಬುಕ್ಕಿಂಗ್ ಆರಂಭವಾದ ಕೇವಲ ಎರಡು ತಿಂಗಳಲ್ಲಿ ಸೊನೆಟ್ ಎಸ್‌ಯುವಿಯು ಈ ಹೊಸ ಮೈಲಿಗಲ್ಲು ಸಾಧಿಸಿದೆ. ಈ ಎಸ್‌ಯುವಿಗಾಗಿ ಕಳೆದ ಎರಡು ತಿಂಗಳಲ್ಲಿ ಪ್ರತಿ ಮೂರು ನಿಮಿಷಕ್ಕೆ ಸರಾಸರಿ ಎರಡು ಬುಕ್ಕಿಂಗ್ ಗಳನ್ನು ಸ್ವೀಕರಿಸಲಾಗಿದೆ ಎಂದು ಕಿಯಾ ಮೋಟಾರ್ಸ್ ಹೇಳಿದೆ.