ಜಿಕ್ಸರ್ 155 ಹಾಗೂ 250 ಬೈಕುಗಳಿಗಾಗಿ ಹೊಸ ಬಣ್ಣ ಬಿಡುಗಡೆಗೊಳಿಸಿದ ಸುಜುಕಿ ಮೋಟಾರ್‌ಸೈಕಲ್

2020-10-05 0

ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ ಕಂಪನಿಯು ಭಾರತದಲ್ಲಿರುವ ತನ್ನ ಜಿಕ್ಸರ್ ಬೈಕುಗಳಿಗಾಗಿ ಹೊಸ ಬಣ್ಣಗಳನ್ನು ಬಿಡುಗಡೆಗೊಳಿಸಿದೆ. ಕಂಪನಿಯು ತನ್ನ 100ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಹೊಸ ಬಣ್ಣಗಳನ್ನು ಬಿಡುಗಡೆಗೊಳಿಸಿದೆ.

ಸುಜುಕಿ ಜಿಕ್ಸರ್ 155 ಹಾಗೂ 250 ಬೈಕುಗಳು ಹೊಸ ಬಣ್ಣಗಳನ್ನು ಹೊಂದಲಿವೆ. ಹೊಸ ಬಣ್ಣವನ್ನು ಹೊಂದುವ ಬೈಕುಗಳ ಬೆಲೆಯಲ್ಲಿ ಯಾವುದೇ ಬದಲಾವಣೆಗಳಾಗುವುದಿಲ್ಲ. ಸುಜುಕಿ ಜಿಕ್ಸರ್ ಎಸ್‌ಎಫ್ 250 ಈಗ ಹೊಸ ಟ್ರೈಟಾನ್ ಬ್ಲೂ / ಸಿಲ್ವರ್ ಬಣ್ಣವನ್ನು ಹೊಂದಲಿದೆ.

ಈ ಬೈಕಿನಲ್ಲಿರುವ ಹೊಸ ಸಾಂಪ್ರದಾಯಿಕ ನೀಲಿ ಹಾಗೂ ಸ್ಲೇಟ್ ಸಿಲ್ವರ್ ಬಣ್ಣಗಳು 1960ರ ದಶಕದ ಆರಂಭದಲ್ಲಿದ್ದ ಸುಜುಕಿಯ ಗ್ರ್ಯಾಂಡ್ ಪ್ರಿಕ್ಸ್ ಬೈಕುಗಳಿಗೆ ಗೌರವ ಸಲ್ಲಿಸುತ್ತವೆ. ಜಿಕ್ಸರ್ ಎಸ್‌ಎಫ್ 250 ಬೈಕಿನ ಬೆಲೆ ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.1.76 ಲಕ್ಷಗಳಾಗಿದೆ.

Videos similaires