ಟಾಟಾ ಮೋಟಾರ್ಸ್ ಕಂಪನಿಯು ತನ್ನ ಆಲ್ಟ್ರೋಜ್ ಕಾರನ್ನು ಈ ವರ್ಷದ ಜನವರಿಯಲ್ಲಿ ಬಿಡುಗಡೆಗೊಳಿಸಿತ್ತು. ಈ ಕಾರು ಪ್ರೀಮಿಯಂ ಹ್ಯಾಚ್‌ಬ್ಯಾಕ್ ಸೆಗ್ ಮೆಂಟಿನಲ್ಲಿರುವ ಜನಪ್ರಿಯ ಕಾರುಗಳಲ್ಲಿ ಒಂದಾಗಿದೆ.
ಈ 9 ತಿಂಗಳುಗಳಲ್ಲಿ ಟಾಟಾ ಆಲ್ಟ್ರೋಜ್ ಕಾರಿನ 25,000 ಯುನಿಟ್ ಗಳನ್ನು ಉತ್ಪಾದಿಸಲಾಗಿದೆ. ಜನವರಿಯಲ್ಲಿ ಆರಂಭವಾದ ಈ ಕಾರಿನ ಉತ್ಪಾದನೆಯು ಕೇವಲ 9 ತಿಂಗಳಲ್ಲಿ ಈ ಸಂಖ್ಯೆಯನ್ನು ತಲುಪಿದೆ. ಲಾಕ್‌ಡೌನ್ ಅವಧಿಯಲ್ಲಿ ಈ ಕಾರಿನ ಉತ್ಪಾದನೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿತ್ತು.
ಟಾಟಾ ಆಲ್ಟ್ರೋಜ್ ದೇಶದ ಸುರಕ್ಷಿತೆಗಾಗಿ 5 ಸ್ಟಾರ್ ರೇಟಿಂಗ್ ಪಡೆದಿದೆ. ಈ ಕಾರು ಈ ಸೆಗ್ ಮೆಂಟಿನಲ್ಲಿ ಮಾರುತಿ ಬಲೆನೊ, ಹ್ಯುಂಡೈ ಐ 20 ಎಲೈಟ್, ಹೋಂಡಾ ಜಾಝ್ ಕಾರುಗಳಿಗೆ ಪೈಪೋಟಿ ನೀಡುತ್ತದೆ.
ಬಿಡುಗಡೆಯಾದ ತಿಂಗಳಿನಲ್ಲಿ ಟಾಟಾ ಆಲ್ಟ್ರೋಜ್ ಕಾರಿನ 4505 ಯುನಿಟ್ ಗಳನ್ನು ಮಾರಾಟ ಮಾಡಲಾಗಿತ್ತು. ಇದುವರೆಗೂ ಈ ಕಾರಿನ 21,528 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ.