ದೇಶೀಯ ಮಾರುಕಟ್ಟೆಯಲ್ಲಿ ಒಂದು ವರ್ಷ ಪೂರೈಸಿದ ಮಾರುತಿ ಸುಜುಕಿ ಎಸ್ ಪ್ರೆಸ್ಸೊ

2020-10-01 4

ಮಾರುತಿ ಸುಜುಕಿ ಕಂಪನಿಯ ಮಿನಿ ಎಸ್‌ಯುವಿ ಎಸ್-ಪ್ರೆಸ್ಸೊ ಬಿಡುಗಡೆಯಾಗಿ ಒಂದು ವರ್ಷ ಪೂರ್ತಿಯಾಗಿದೆ. ಎಸ್-ಪ್ರೆಸ್ಸೊ ಕಾರನ್ನು 2019ರ ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆಗೊಳಿಸಲಾಗಿತ್ತು.

ಈ ಕಾರಿನ ವಿನ್ಯಾಸವು ಎಸ್‌ಯುವಿಯಂತಿರುವ ಕಾರಣಕ್ಕೆ ಮಾರುತಿ ಈ ಕಾರನ್ನು ಮಿನಿ ಎಸ್‌ಯುವಿ ಎಂದು ಕರೆಯುತ್ತದೆ. ಬಿಡುಗಡೆಯಾದ ಒಂದು ವರ್ಷದಲ್ಲಿ ಈ ಕಾರಿನ 75,000 ಯುನಿಟ್ ಗಳನ್ನು ಮಾರಾಟ ಮಾಡಲಾಗಿದೆ.

ಮಾರುತಿ ಎಸ್-ಪ್ರೆಸ್ಸೊ ಕಾರನ್ನು ಕಂಪನಿಯ ಅರೆನಾ ಡೀಲರ್ ಗಳ ಮೂಲಕ ಮಾರಾಟ ಮಾಡಲಾಗುತ್ತದೆ. ಈ ಹ್ಯಾಚ್‌ಬ್ಯಾಕ್ ಕಾರಿನಲ್ಲಿ ಕಂಪನಿಯು ಹಲವಾರು ಆಧುನಿಕ ಫೀಚರ್ ಗಳನ್ನು ನೀಡಿದೆ.

ಎಸ್-ಪ್ರೆಸ್ಸೊ ಕಾರನ್ನು ಕಂಪನಿಯ 5ನೇ ತಲೆಮಾರಿನ ಹರ್ ಟೆಕ್ಟ್ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗಿದೆ.

Free Traffic Exchange