ಆಲ್ಟ್ರೋಜ್ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಡೀಸೆಲ್ ಕಾರಿನ ಬೆಲೆ ಕಡಿತಗೊಳಿಸಿದ ಟಾಟಾ ಮೋಟಾರ್ಸ್

2020-09-22 2

ಟಾಟಾ ಮೋಟಾರ್ಸ್ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿರುವ ತನ್ನ ಆಲ್ಟ್ರೋಜ್ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರಿನ ಬೆಲೆಯನ್ನು ಕಡಿಮೆಗೊಳಿಸಿದೆ. ಆಲ್ಟ್ರೊಜ್ ಡೀಸೆಲ್ ಮಾದರಿಯ ಬೆಲೆಯನ್ನು ರೂ.40,000ಗಳಷ್ಟು ಕಡಿಮೆಗೊಳಿಸಲಾಗಿದೆ.

ಆಲ್ಟ್ರೋಜ್ ಡೀಸೆಲ್ ಕಾರನ್ನು ಎಕ್ಸ್‌ಇ, ಎಕ್ಸ್‌ಎಂ, ಎಕ್ಸ್‌ಟಿ, ಎಕ್ಸ್‌ ಝಡ್ ಹಾಗೂ ಎಕ್ಸ್‌ ಝಡ್ (ಒ) ಎಂಬ ಐದು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಬೇಸ್- ಮಾದರಿಯಾದ ಎಕ್ಸ್‌ಇ ಡೀಸೆಲ್ ಮಾದರಿಯನ್ನು ಹೊರತುಪಡಿಸಿ ಇತರ ಎಲ್ಲಾ ಡೀಸೆಲ್ ಮಾದರಿಗಳ ಬೆಲೆಯನ್ನು ಕಡಿತಗೊಳಿಸಲಾಗಿದೆ.

ಬೆಲೆ ಇಳಿಕೆಯ ನಂತರ, ಆಲ್ಟ್ರೋಜ್ ಡೀಸೆಲ್ ಮಾದರಿಯ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.6.99 ಲಕ್ಷದಿಂದ ರೂ.9.09 ಲಕ್ಷಗಳಾಗಿದೆ. ಯಾವ ಕಾರಣಕ್ಕೆ ಬೆಲೆ ಕಡಿತಗೊಳಿಸಲಾಗಿದೆ ಎಂಬ ಮಾಹಿತಿಯನ್ನು ಟಾಟಾ ಮೋಟಾರ್ಸ್ ಕಂಪನಿಯು ನೀಡಿಲ್ಲ.

Videos similaires