ವೈಲ್ಡ್ ಎಲೆಕ್ಟ್ರಿಕ್ ಕ್ರೂಸರ್ ಬಿಡುಗಡೆಗೊಳಿಸಿದ ಇಮೋಸ್

2020-09-21 8

ಆಸ್ಟ್ರೇಲಿಯಾ ಮೂಲದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಇಮೋಸ್ (ಎಲೆಕ್ಟ್ರಿಕ್ ಮೊಬಿಲಿಟಿ ಸೊಲ್ಯೂಷನ್ಸ್) ತನ್ನ ಹೊಸ ಎಲೆಕ್ಟ್ರಿಕ್ ಕ್ರೂಸರ್ ಬೈಕ್ ಆದ ವೈಲ್ಡ್ ಅನ್ನು ಆಸ್ಟ್ರೇಲಿಯಾದಲ್ಲಿ ಅನಾವರಣಗೊಳಿಸಿದೆ.

ಇಮೋಸ್ ಕಂಪನಿಯು ಆಸ್ಟ್ರೇಲಿಯಾದಲ್ಲಿ ತನ್ನ ವೈಲ್ಡ್ ಎಲೆಕ್ಟ್ರಿಕ್ ಕ್ರೂಸರ್ ಬೈಕ್ ಅನ್ನು ಮಾರಾಟ ಮಾಡಲು ಅನುಮತಿ ಪಡೆದಿದೆ. ವೈಲ್ಡ್ ಎಲೆಕ್ಟ್ರಿಕ್ ಕ್ರೂಸರ್ ಬೈಕಿನ ಬೆಲೆ 2,999 ಆಸ್ಟ್ರೇಲಿಯನ್ ಡಾಲರ್ ಗಳು ಅಂದರೆ ಭಾರತದ ರೂಪಾಯಿ ಮೌಲ್ಯದಲ್ಲಿ ರೂ.1.61 ಲಕ್ಷಗಳಾಗುತ್ತದೆ.

ಹೊಸ ವೈಲ್ಡ್ ಎಲೆಕ್ಟ್ರಿಕ್ ಕ್ರೂಸರ್ ಬೈಕ್ ಅನ್ನು ಕಂಪನಿಯ ವೈಯಕ್ತಿಕ ಸಾರಿಗೆ ಸರಣಿಗೆ ಸೇರಿಸಲಾಗುವುದು.

Videos similaires