ಹ್ಯುಂಡೈ ಐ 10 ಕಾರನ್ನು ಹ್ಯುಂಡೈ ಸ್ಯಾಂಟ್ರೋ ಕಾರಿನ ಉತ್ತರಾಧಿಕಾರಿಯಾಗಿ 2007ರಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಯಿತು. ಈ ಕಾರು ಸಹ ಸ್ಯಾಂಟ್ರೋ ಕಾರಿನ ರೀತಿಯಲ್ಲಿ ಹೆಚ್ಚಿನ ಜನಪ್ರಿಯತೆಯನ್ನು ಪಡೆಯಿತು. 2015ರಲ್ಲಿ ಹ್ಯುಂಡೈ ಕಂಪನಿಯು ಸ್ಯಾಂಟ್ರೊ ಕಾರನ್ನು ಸ್ಥಗಿತಗೊಳಿಸಿದ ನಂತರ ಈ ಪೋರ್ಟ್ ಫೋಲಿಯೋದಲ್ಲಿ ಐ 10 ಕಾರು ಮಾತ್ರ ಉಳಿದಿತ್ತು.
ಐ 10 ಕಾರನ್ನು ಹಲವಾರು ಬಾರಿ ಅಪ್ ಡೇಟ್ ಮಾಡಲಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ ಎರಡನೇ ತಲೆಮಾರಿನ ಐ 10 ಕಾರು ಸಹ ಅದ್ಭುತವಾಗಿದೆ. ಹ್ಯುಂಡೈ ಕಂಪನಿಯು ಈ ವರ್ಷದ ಆರಂಭದಲ್ಲಿ 1-ಲೀಟರಿನ ಟರ್ಬೊ ಪೆಟ್ರೋಲ್ ಎಂಜಿನ್ ಹೊಂದಿರುವ ಗ್ರ್ಯಾಂಡ್ ಐ 10 ನಿಯೋಸ್ ಟರ್ಬೊ ಕಾರನ್ನು ಬಿಡುಗಡೆಗೊಳಿಸಿತ್ತು.