ಟೊಯೊಟಾ ಅರ್ಬನ್ ಕ್ರೂಸರ್ ಕಾರಿನ ಬುಕ್ಕಿಂಗ್ ಗಳನ್ನು ಆಗಸ್ಟ್ 22ರಿಂದ ಆರಂಭಿಸಲಾಗಿದೆ. ರೂ.11,000 ಪಾವತಿಸಿ ಈ ಕಾರನ್ನು ಬುಕ್ ಮಾಡಬಹುದು. ಟೊಯೊಟಾ ಅರ್ಬನ್ ಕ್ರೂಸರ್ ಸೆಪ್ಟೆಂಬರ್ 23ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ ಎಂದು ಕಂಪನಿ ತಿಳಿಸಿದೆ.
ಟೊಯೊಟಾ ಕಂಪನಿಯು ಇತ್ತೀಚೆಗಷ್ಟೇ ರೆಸ್ಪೆಕ್ಟ್ ಪ್ಯಾಕೇಜ್ ಅನ್ನು ಘೋಷಿಸಿತ್ತು. ಇದರಡಿಯಲ್ಲಿ ಕಂಪನಿಯು ಮುಂಚಿತವಾಗಿ ಈ ಕಾರನ್ನು ಬುಕ್ಕಿಂಗ್ ಮಾಡುವ ಗ್ರಾಹಕರಿಗೆ 2 ವರ್ಷಗಳ ಉಚಿತ ಮೆಂಟೆನೆನ್ಸ್ ನೀಡಲಿದೆ.
ಟೊಯೊಟಾ ಅರ್ಬನ್ ಕ್ರೂಸರ್ ಮಾರುತಿ ಸುಜುಕಿ ಬ್ರೆಝಾ ಕಾರಿನ ರಿಬ್ಯಾಡ್ಜ್ ಆವೃತ್ತಿಯಾಗಿದೆ.