ಬಿಎಂಡಬ್ಲ್ಯು ಮೋಟರ್‌ರಾಡ್ ಇಂಡಿಯಾ ಕಂಪನಿಯು ತನ್ನ ಹೆರಿಟೇಜ್ ಲೈನ್‌ಅಪ್ ಸರಣಿಯ ಆರ್ 18 ಕ್ರೂಸರ್ ಬೈಕಿನ ಟೀಸರ್ ಅನ್ನು ಬಿಡುಗಡೆಗೊಳಿಸಿದೆ. ಈ ಟೀಸರ್ ನಲ್ಲಿ ಹೇಳಿರುವ ಪ್ರಕಾರ ಈ ಬೈಕ್ ಅನ್ನು ಸೆಪ್ಟೆಂಬರ್ 19ರಂದು ಬಿಡುಗಡೆಗೊಳಿಸಲಾಗುವುದು.
ಬಿಡುಗಡೆಗೂ ಬಿಎಂಡಬ್ಲ್ಯು ಮೋಟರ್‌ರಾಡ್ ಕಂಪನಿಯು ಆರ್ 18 ಬೈಕ್ ಅನ್ನು ಭಾರತದ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಿ, ಅದರ ಕೆಲವು ವಿವರಗಳನ್ನು ಬಹಿರಂಗಪಡಿಸಿದೆ. ಬಿಎಂಡಬ್ಲ್ಯು ಮೋಟರ್‌ರಾಡ್ ಕಂಪನಿಯು ಈ ಬೈಕ್ ಅನ್ನು ಸ್ಟ್ಯಾಂಡರ್ಡ್ ಹಾಗು ಫಸ್ಟ್ ಎಡಿಷನ್ ಎಂಬ ಎರಡು ಮಾದರಿಗಳಲ್ಲಿ ಬಿಡುಗಡೆಗೊಳಿಸಲಿದೆ.
ಫಸ್ಟ್ ಎಡಿಷನ್ ಮಾದರಿಯು ಸ್ಟ್ಯಾಂಡರ್ಡ್ ಮಾದರಿಗಿಂತ ಹೆಚ್ಚಿನ ಕಾಸ್ಮೆಟಿಕ್ ಅಂಶಗಳನ್ನು ಹೊಂದಿದೆ. ಇವುಗಳಲ್ಲಿ ಕ್ರೋಮ್ ಬಣ್ಣದ ಬಿಡಿಭಾಗಗಳು, ಟ್ಯಾಂಕ್ ಹಾಗೂ ಫೆಂಡರ್‌ಗಳ ಮೇಲೆ ಪಿನ್-ಸ್ಟ್ರೈಪಿಂಗ್, ಐತಿಹಾಸಿಕ ಟ್ಯಾಂಕ್ ಲಾಂಛನ, ಲೆದರ್ ಬೆಲ್ಟ್, ಗ್ಲೌಸ್ ಗಳು ಸೇರಿವೆ.