ಪಿಯಾಜಿಯೊ ಕಂಪನಿಯು ತನ್ನ ವಿಶೇಷ ಆವೃತ್ತಿಯ ವೆಸ್ಪಾ ರೇಸಿಂಗ್ ಸಿಕ್ಸ್‌ಟೀಸ್ ಸ್ಕೂಟರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಹೊಸ ವೆಸ್ಪಾ ರೇಸಿಂಗ್ ಸಿಕ್ಸ್‌ಟೀಸ್ ಸೀಮಿತ ಆವೃತ್ತಿಯ ಸ್ಕೂಟರ್ ಆಗಿದೆ. ಈ ಸ್ಕೂಟರ್ ಅನ್ನು 125 ಸಿಸಿ ಹಾಗೂ 150 ಸಿಸಿ ಎಂಜಿನ್ ಗಳಲ್ಲಿ ಮಾರಾಟ ಮಾಡಲಾಗುವುದು.
125 ಸಿಸಿ ಸ್ಕೂಟರಿನ ಬೆಲೆ ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.1.20 ಲಕ್ಷಗಳಾದರೆ, 150 ಸಿಸಿಯ ಬೆಲೆ ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.1.32 ಲಕ್ಷಗಳಾಗಿದೆ. ವೆಸ್ಪಾ ರೇಸಿಂಗ್ ಸಿಕ್ಸ್‌ಟೀಸ್ ಸ್ಕೂಟರ್ ಅನ್ನು ಕಂಪನಿಯ ಎಸ್ಎಕ್ಸ್ಎಲ್ 125 ಹಾಗೂ ಎಸ್ಎಕ್ಸ್ಎಲ್ 150 ಸ್ಕೂಟರ್ ಗಳ ಆಧಾರದ ಮೇಲೆ ತಯಾರಿಸಲಾಗಿದೆ.
ಈ ವಿಶೇಷ ಆವೃತ್ತಿಯ ಸ್ಕೂಟರ್ ಅನ್ನು ದೆಹಲಿಯಲ್ಲಿ ನಡೆದಿದ್ದ 2020ರ ಆಟೋ ಎಕ್ಸ್‌ಪೋದಲ್ಲಿ ಮೊದಲ ಬಾರಿಗೆ ಪ್ರದರ್ಶಿಸಲಾಗಿತ್ತು.