ಹೊಸ ಆರ್ 30 ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ ಒಕಿನಾವಾ

2020-08-26 386

ಒಕಿನಾವಾ ಕಂಪನಿಯು ಲೋ ಸ್ಪೀಡ್ ಸೆಗ್ ಮೆಂಟಿನಲ್ಲಿ ಹೊಸ ಆರ್ 30 ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆಗೊಳಿಸಿದೆ. ಹೊಸ ಒಕಿನಾವಾ ಆರ್ 30 ಎಲೆಕ್ಟ್ರಿಕ್ ಸ್ಕೂಟರಿನ ಬೆಲೆ ಎಕ್ಸ್ ಶೋರೂಂ ರೂ.58,992ಗಳಾಗಿದೆ. ರೂ. 2 ಸಾವಿರ ಪಾವತಿಸಿ ಈ ಎಲೆಕ್ಟ್ರಿಕ್ ಸ್ಕೂಟರ್‌ ಅನ್ನು ಬುಕ್ ಮಾಡಬಹುದು.

ಒಕಿನಾವಾ ಆರ್ 30 ಎಲೆಕ್ಟ್ರಿಕ್ ಸ್ಕೂಟರಿನಲ್ಲಿ ಅಳವಡಿಸಲಾಗಿರುವ 1.25 ಕಿ.ವ್ಯಾನ ಡಿಟ್ಯಾಚೇಬಲ್ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ ಈ ಸ್ಕೂಟರ್ 60 ಕಿ.ಮೀಗಳವರೆಗೆ ಚಲಿಸುವಂತೆ ಮಾಡುತ್ತದೆ. ಈ ಬ್ಯಾಟರಿಯು 4ರಿಂದ 5 ಗಂಟೆಗಳಲ್ಲಿ ಪೂರ್ತಿಯಾಗಿ ಚಾರ್ಜ್ ಆಗುತ್ತದೆ. ಆರ್ 30 ಎಲೆಕ್ಟ್ರಿಕ್ ಸ್ಕೂಟರ್ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 25 ಕಿ.ಮೀಗಳಾಗಿದೆ. ಒಕಿನಾವಾ ಆರ್ 30 ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಚಾರ್ಜರ್ ಆಟೋ ಕಟ್-ಆಫ್ ಫಂಕ್ಷನ್ ನೀಡಲಾಗಿದೆ