ಜಾಗ್ವಾರ್ ಲ್ಯಾಂಡ್ ರೋವರ್ ಇಂಡಿಯಾ ಕಂಪನಿಯು ಬೆಂಗಳೂರಿನಲ್ಲಿ ತನ್ನ ಹೊಸ 3 ಎಸ್ ರಿಟೇಲ್ ಘಟಕವನ್ನು ತೆರೆದಿದೆ. ಮಾರ್ಕ್‌ಲ್ಯಾಂಡ್‌ನ ಈ ಹೊಸ ಘಟಕವು ಹೊಸ ವಿಮಾನ ನಿಲ್ದಾಣ ರಸ್ತೆಯಲ್ಲಿದೆ. ಮಾರ್ಕ್‌ಲ್ಯಾಂಡ್ ಈ ಹಿಂದೆ ಹೊಸೂರು ರಸ್ತೆಯಲ್ಲಿ ತನ್ನ 3 ಎಸ್ ಘಟಕವನ್ನು ಹೊಂದಿತ್ತು.
4,160 ಚದರ ಮೀಟರ್ ವಿಸ್ತೀರ್ಣದಲ್ಲಿರುವ ಈ 3 ಎಸ್ ಘಟಕದಲ್ಲಿ ಸೇಲ್ಸ್, ಸರ್ವೀಸ್ ಹಾಗೂ ಸ್ಪೇರ್ ಪಾರ್ಟ್ ಗಳನ್ನು ಒಂದೇ ಸೂರಿನಡಿ ನೀಡಲಾಗುವುದು. ಶೋ ರೂಂನ ಸೇಲ್ಸ್ ಏರಿಯಾದಲ್ಲಿ ಜಾಗ್ವಾರ್ ಹಾಗೂ ಲ್ಯಾಂಡ್ ರೋವರ್ ಸರಣಿಯ ಎಲ್ಲಾ ಕಾರುಗಳನ್ನು ಡಿಸ್ ಪ್ಲೇ ಮಾಡಲಾಗುವುದು.
ಈ ಘಟಕವು ಗ್ರಾಹಕರಿಗೆ ವಾಹನಗಳನ್ನು ವಿತರಿಸಲು ಆಕರ್ಷಕವಾದ ಹ್ಯಾಂಡೊವರ್ ಬೇಯನ್ನು ಹೊಂದಿದೆ.