ಜರ್ಮನಿ ಮೂಲದ ಖ್ಯಾತ ಕಾರು ತಯಾರಕ ಕಂಪನಿಯಾದ ಆಡಿ ತನ್ನ ಆರ್ ಎಸ್ ಕ್ಯೂ 8 ಪರ್ಫಾರ್ಮೆನ್ಸ್ ಎಸ್‌ಯುವಿಯನ್ನು ಆಗಸ್ಟ್ 27ರಂದು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುತ್ತಿದೆ. ರೂ.15 ಲಕ್ಷ ಪಾವತಿಸಿ ಈ ಎಸ್‌ಯುವಿಯನ್ನು ಬುಕ್ಕಿಂಗ್ ಮಾಡಬಹುದು.
ಭವಿಷ್ಯದಲ್ಲಿ ಹೆಚ್ಚಿನ ಆರ್ ಎಸ್ ಮಾದರಿಗಳನ್ನು ಬಿಡುಗಡೆಗೊಳಿಸುವುದಾಗಿ ಆಡಿ ಕಂಪನಿಯು ತಿಳಿಸಿದೆ. ಆರ್ ಎಸ್ ಕ್ಯೂ 8 ಎಸ್‌ಯುವಿಯು ಆಡಿ ಕಂಪನಿಯ ಭಾಗವಾಗಿರುವ ಲ್ಯಾಂಬೊರ್ಗಿನಿ ಉರುಸ್‌ನಲ್ಲಿರುವಂತಹ ಅನೇಕ ಮೆಕಾನಿಕಲ್ ಅಂಶಗಳನ್ನು ಹೊಂದಿದೆ.
ಈ ಎಸ್‌ಯುವಿ ಆಡಿ ಕಂಪನಿಯ ಕ್ವಾಟ್ರೋ ಫೋರ್-ವೀಲ್-ಡ್ರೈವ್ ಸಿಸ್ಟಂ ಅನ್ನು ಹೊಂದಿದೆ. ಆರ್ ಎಸ್ ಕ್ಯೂ 8 ಎಸ್‌ಯುವಿಯಲ್ಲಿ 4.0-ಲೀಟರಿನ ಟ್ವಿನ್-ಟರ್ಬೊ ವಿ8 ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 600 ಬಿಹೆಚ್ ಪಿ ಪವರ್ ಹಾಗೂ 800 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.
ಆರ್ ಎಸ್ ಕ್ಯೂ 8 ಎಸ್‌ಯುವಿ ಬಗೆಗಿನ ಮತ್ತಷ್ಟು ವಿವರಗಳಿಗಾಗಿ ಈ ವೀಡಿಯೊ ನೋಡಿ.