ಪೂಜೆಗೆ ಅರ್ಪಿಸುವ ಗರಿಕೆ ಹೇಗಿರಬೇಕು, ಯಾವ ಗರಿಕೆ ಅರ್ಪಿಸಬಾರದು? Garike For Ganesha | Boldsky Kannada

2020-08-04 20

ಹಿಂದೂ ಧರ್ಮದಲ್ಲಿ ಪೂಜೆ ಮಾಡುವಾಗ ಗರಿಕೆ ಹುಲ್ಲು ಇರಲೇಬೇಕು. ಯಾವುದೇ ಪೂಜೆಗೆ ಮುನ್ನ ವಿಘ್ನ ನಿವಾರಕ ಗಣೇಶನನ್ನು ಪೂಜೆ ಮಾಡಲಾಗುವುದು. ಗಣೇಶನ ಪೂಜೆಯಲ್ಲಿ ಗರಿಕೆಗೆ ವಿಶೇಷವಾದ ಸ್ಥಾನವಿದೆ. ಗಣೇಶನ ಪೂಜೆ ಎಂದ ಮೇಲೆ ಗರಿಕೆ ಇರಲೇಬೇಕು.



ಗರಿಕೆಯ ಎಲೆಗಳು ಮೂರು ದೇವ ತತ್ವಗಳಾದ ಶಿವ, ಶಕ್ತಿ ಮತ್ತು ಗಣೇಶನನ್ನು ಪ್ರತಿಬಿಂಬಿಸುತ್ತದೆ. ಗರಿಕೆ ಹುಲ್ಲಿಗೆ ದೈವ ಸ್ವರೂಪವನ್ನು ಆಕರ್ಷಿಸುವವ ಶಕ್ತಿಯಿದೆ. ಆದ್ದರಿಂದಲೇ ಇದನ್ನು ಪೂಜೆ, ಹೋಮಗಳಲ್ಲಿ ಬಳಸಲಾಗುವುದು.

ಶಿವ ಪೂಜೆಯಲ್ಲಿ ಬಿಲ್ವೆ ಪತ್ರೆ ಎಲೆಗಳನ್ನು ಅರ್ಪಿಸಿದರೆ ಗಣೇಶನ ಪೂಜೆಯಲ್ಲಿ ಗರಿಕೆಯನ್ನು ಅರ್ಪಿಸಲಾಗುವುದು. ಗರಿಕೆ ಅರ್ಪಿಸದಿದ್ದರೆ ಗಣೇಶ ಮತ್ಯಾವ ನೈವೇದ್ಯ ಸ್ವೀಕರಿಸುವುದಿಲ್ಲ, ಗಣೇಶ ಗರಿಕೆಯನ್ನೇ ಆಹಾರವನ್ನಾಗಿ ಸೇವಿಸುತ್ತಾನೆ ಎಂಬ ನಂಬಿಕೆಯಿದೆ.

#GarikeInGanapatiPooja #GarikeforGanesha #Garike #ಗಣಪತಿಪೂಜೆಯಲ್ಲಿಗರಿಕೆ

Free Traffic Exchange