ಅಪಾಚೆ ಆರ್ ಆರ್ 310 ಬೈಕಿನ ಬೆಲೆ ಏರಿಕೆ ಮಾಡಿದ ಟಿವಿಎಸ್ ಮೋಟಾರ್

2020-07-25 25

ಟಿವಿಎಸ್ ಮೋಟಾರ್ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿರುವ ತನ್ನ ಅಪಾಚೆ ಆರ್ ಆರ್ 310 ಬೈಕಿನ ಬೆಲೆಯನ್ನು ಹೆಚ್ಚಿಸಿದೆ. ಈ ಬೈಕ್ ಅನ್ನು ಈ ವರ್ಷದ ಆರಂಭದಲ್ಲಿ ಬಿಎಸ್ 6 ಎಂಜಿನ್ ನೊಂದಿಗೆ ಅಪ್ ಡೇಟ್ ಗೊಳಿಸಲಾಗಿತ್ತು. ಅಪ್ ಡೇಟ್ ಗೊಂಡ ನಂತರ ಮೊದಲ ಬಾರಿಗೆ ಬೆಲೆ ಏರಿಕೆ ಮಾಡಲಾಗುತ್ತಿದೆ.

ಅಪಾಚೆ ಆರ್ ಆರ್ 310 ಬೈಕಿನ ಬೆಲೆಯನ್ನು ರೂ.5,000ಗಳಷ್ಟು ಹೆಚ್ಚಿಸಲಾಗಿದ್ದು, ಬೆಲೆ ಏರಿಕೆಯ ನಂತರ ಈ ಬೈಕಿನ ಬೆಲೆ
ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.2.45 ಲಕ್ಷಗಳಾಗಿದೆ. ಈ ಬೆಲೆ ಏರಿಕೆಯು ಬೈಕಿನ ಬೇಡಿಕೆಯ ಮೇಲೆ ಯಾವುದೇ ಪರಿಣಾಮವನ್ನುಂಟು ಮಾಡುವ ಸಾಧ್ಯತೆಗಳಿಲ್ಲ.

Videos similaires