ಬಿಎಂಡಬ್ಲ್ಯು ಮೋಟರ್‌ರಾಡ್ ತನ್ನ 2020ರ ಹೊಸ ಎಸ್ 1000 ಎಕ್ಸ್‌ಆರ್ ಪ್ರೊ ಎಡಿವಿ-ಟೂರರ್ ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಹೊಸ ಬಿಎಂಡಬ್ಲ್ಯು ಎಸ್ 1000 ಎಕ್ಸ್‌ಆರ್ ಬೈಕ್ ಅನ್ನು ಪ್ರೊ ಮಾದರಿಯಲ್ಲಿ ಮಾತ್ರ ಮಾರಾಟ ಮಾಡಲಾಗುವುದು.
ಈ ಬೈಕಿನ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.20.90 ಲಕ್ಷಗಳಾಗಿದೆ.
ಹೊಸ ಬೈಕಿನ ಬುಕ್ಕಿಂಗ್ ಗಳನ್ನು ಆರಂಭಿಸಲಾಗಿದೆ. ಗ್ರಾಹಕರು ಆನ್‌ಲೈನ್ ಅಥವಾ ದೇಶಾದ್ಯಂತವಿರುವ ಯಾವುದೇ ಬಿಎಂಡಬ್ಲ್ಯು ಮೋಟರ್‌ರಾಡ್ ಶೋರೂಂಗಳಲ್ಲಿ ಈ ಬೈಕ್ ಅನ್ನು ಬುಕ್ಕಿಂಗ್ ಮಾಡಬಹುದಾಗಿದೆ. ಈ ಬೈಕಿನ ವಿತರಣೆಯನ್ನು ಶೀಘ್ರದಲ್ಲೇ ಆರಂಭಿಸಲಾಗುವುದೆಂದು ಕಂಪನಿ ಹೇಳಿದೆ.