ಈಗಂತೂ ಪ್ರತಿಯೊಂದು ಮನೆಯಲ್ಲಿ ಕಷಾಯ ಮಾಡಿ ಕುಡಿಯುವುದು ಇದ್ದೇ ಇದೆ. ಕೆಲವರಂತೂ ಕೊರೊನಾ ಭಯಕ್ಕೆ ಸಿಕ್ಕಾಪಟ್ಟೆ ಕಷಾಯ ಮಾಡಿ ಕುಡಿಯುವವರೂ ಇದ್ದಾರೆ. ಏನೇ ಆಗಲಿ ಅತಿಯಾದರೆ ಅಮೃತವೂ ವಿಷವಾದೀತು. ಕೆಮ್ಮು, ಶೀತ ಇವೆಲ್ಲಾ ಮಳೆಗಾಲದಲ್ಲಿ ಕಾಡುವುದು ಸಹಜ. ಇವುಗಳನ್ನು ತಡೆಗಟ್ಟುವಲ್ಲಿ ಕಷಾಯ ತುಂಬಾ ಪರಿಣಾಮರಿ. ಅಲ್ಲದೆ ಕಷಾಯ ಕುಡಿಯುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚಾಗುವುದು. ಆದರೆ ಈ ಕಷಾಯ ಯಾವಾಗ ಕುಡಿದರೆ ಒಳ್ಳೆಯದು ಎಂಬುವುದು ಮಾತ್ರ ಬಹುತೇಕರಿಗೆ ಗೊತ್ತಿರುವುದಿಲ್ಲ. ಆಯುರ್ವೇದದ ಪ್ರಕಾರ ಮನುಷ್ಯರಲ್ಲಿ ಮೂರು ರೀತಿಯ ಶರೀರ ಪ್ರವೃತ್ತಿ ಕಾಣಬಹುದು. ವಾತ, ಪಿತ್ತ, ಕಫ... ಈ ಮೂರು ಬಗೆಯ ಶರೀರದವರ ಗುಣಗಳು ಭಿನ್ನವಾಗಿರುತ್ತದೆ. ಆಯುರ್ವೇದ ಔಷಧಿ ನೀಡುವಾಗ ಶರೀರದ ಬಗೆ ತಿಳಿದುಕೊಂಡು ಔಷಧಿ ನೀಡುತ್ತಾರೆ, ಹೀಗಾಗಿ ಆ ಔಷಧಿ ತುಂಬಾ ಪರಿಣಾಮಕಾರಿಯಾಗಿರುತ್ತದೆ.
#Kadha #Kadharecipe #Immunityboostingkadha #kashaya