ಹೋಂಡಾ ಕಾರ್ಸ್ ಇಂಡಿಯಾ ಕಂಪನಿಯು ತನ್ನ ಸಿವಿಕ್ ಸೆಡಾನ್ ಬಿಎಸ್ 6 ಡೀಸೆಲ್ ಎಂಜಿನ್ ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಸೆಡಾನ್ ಕಾರ್ ಅನ್ನು ವಿಎಕ್ಸ್ ಹಾಗೂ ಝಡ್ಎಕ್ಸ್ ಎಂಬ ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ.
ಮೂಲ ಮಾದರಿಯ ವಿಎಕ್ಸ್ ಕಾರಿನ ಬೆಲೆ ದೆಹಲಿಯ ಎಕ್ಸ್ ಶೋರೂಂ ದರದಂತೆ 20.72 ಲಕ್ಷ ರೂಪಾಯಿಗಳಾದರೆ, ಹೈ ಎಂಡ್ ಮಾದರಿಯ ಝಡ್ ಎಕ್ಸ್ ಕಾರಿನ ಬೆಲೆ ದೆಹಲಿಯ ಎಕ್ಸ್ ಶೋರೂಂ ದರದಂತೆ 22.34 ಲಕ್ಷ ರೂಪಾಯಿಗಳಾಗಿದೆ.
ಹೋಂಡಾ ಸಿವಿಕ್ ಬಿಎಸ್ 6 ಡೀಸೆಲ್ ಕಾರಿನಲ್ಲಿ 1.5-ಲೀಟರಿನ ಐ-ಡಿಟಿಇಸಿ ಟರ್ಬೋ ಚಾರ್ಜ್ಡ್ ಡೀಸೆಲ್ ಎಂಜಿನ್ ಅಳವಡಿಸಲಾಗಿದೆ.