ದೇಶಿಯ ಮಾರುಕಟ್ಟೆಯಲ್ಲಿ ಹೋಂಡಾ ಸಿವಿಕ್ ಬಿಎಸ್ 6 ಡೀಸೆಲ್ ಕಾರಿನ ಬುಕ್ಕಿಂಗ್‌ಗಳನ್ನು ಆರಂಭಿಸಲಾಗಿದೆ. ಬಿಡುಗಡೆಗೂ ಮುನ್ನ ಡೀಸೆಲ್ ಸೆಡಾನ್ ಮಾದರಿಯ ಬುಕ್ಕಿಂಗ್‌ಗಳನ್ನು ಆರಂಭಿಸಿರುವುದನ್ನು ಕಂಪನಿಯು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.
ಬಿಎಸ್ 4 ಮಾದರಿಗಳಲ್ಲಿದ್ದ ಎಂಜಿನ್ ಅನ್ನು ಅಪ್‌ಡೇಟ್ ಮಾಡಿ ಬಿಎಸ್ 6 ಮಾದರಿಯಲ್ಲಿ ಅಳವಡಿಸಲಾಗಿದೆ. 1.6-ಲೀಟರ್ ಐ-ಡಿಟಿಇಸಿ ನಾಲ್ಕು ಸಿಲಿಂಡರಿನ ಬಿಎಸ್ 6 ಡೀಸೆಲ್ ಎಂಜಿನ್ 4,000 ಆರ್‌ಪಿಎಂನಲ್ಲಿ 118 ಬಿಹೆಚ್‌ಪಿ ಪವರ್ ಹಾಗೂ 2,000 ಆರ್‌ಪಿಎಂನಲ್ಲಿ 300 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.
ಈ ಎಂಜಿನ್‌ನಲ್ಲಿ ಆರು-ಸ್ಪೀಡಿನ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಅಥವಾ ಒಂಬತ್ತು-ಸ್ಪೀಡಿನ ಆಟೋಮ್ಯಾಟಿಕ್ ಯುನಿಟ್ ಅಳವಡಿಸಲಾಗಿದೆ. ಹೊಸ ಕಾರು ಪ್ರತಿ ಲೀಟರ್ ಡೀಸೆಲ್‌ಗೆ 26.8 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಹೇಳಲಾಗಿದೆ.
ಅಪ್‌ಡೇಟ್ ಮಾಡಲಾದ ಎಂಜಿನ್ ಹೊರತಾಗಿ ಈ ಕಾರು ಪೆಟ್ರೋಲ್ ಎಂಜಿನ್ ಕಾರುಗಳಲ್ಲಿರುವ ಫೀಚರ್ ಹಾಗೂ ಎಕ್ವಿಪ್‌ಮೆಂಟ್‌ಗಳನ್ನು ಹೊಂದಿದೆ.