ಹೀರೋ ಮೊಟೊಕಾರ್ಪ್ ಕಂಪನಿಯು ತನ್ನ ಡಿಜಿಟಲ್ ಸೇವೆಗಳನ್ನು ಮತ್ತಷ್ಟು ಬಲಪಡಿಸಲು ಆನ್‌ಲೈನ್ ಸೇಲ್ಸ್ ಪ್ಲಾಟ್ ಫಾರಂ ಅನ್ನು ಆರಂಭಿಸಿದೆ.
ಈ ಆನ್‌ಲೈನ್ ಸೇಲ್ಸ್ ಪ್ಲಾಟ್ ಫಾರಂ ಸಂಪೂರ್ಣವಾಗಿ ಡಿಜಿಟಲ್ ಆಗಿರಲಿದ್ದು, ಗ್ರಾಹಕರಿಗೆ ತಡೆರಹಿತ ಖರೀದಿ ಅನುಭವವನ್ನು ನೀಡಲಿದೆ.
ಗ್ರಾಹಕರು ತಮ್ಮ ಇಷ್ಟದ ಬೈಕ್ ಅಥವಾ ಸ್ಕೂಟರ್ ಅನ್ನು ಕಂಪನಿಯ ವೆಬ್‌ಸೈಟ್‌ನಿಂದ ನೇರವಾಗಿ, ಸುಲಭವಾಗಿ, ಪಾರದರ್ಶಕವಾದ ರೀತಿಯಲ್ಲಿ ಖರೀದಿಸಲು
ಅನುವು ಮಾಡಿಕೊಡುತ್ತದೆ.
ಗ್ರಾಹಕರು ಕಂಪನಿಯ ಅಧಿಕೃತ ವೆಬ್‌ಸೈಟ್ ಆದ www.heromotocorp.comಗೆ ಭೇಟಿ ನೀಡಿ, ಅಲ್ಲಿರುವ eSHOP ಆಯ್ಕೆ ಮಾಡಿಕೊಳ್ಳಬೇಕು.
ನಂತರ ಆನ್‌ಲೈನ್ ಖರೀದಿ / ಬುಕಿಂಗ್ ಪೇಜ್ ಕಂಡು ಬರುತ್ತದೆ.