ಮರ್ಸಿಡಿಸ್ ಬೆಂಝ್ ಕಂಪನಿಯು ತನ್ನ 2020ರ ಎಎಂಜಿ ಜಿಟಿ-ಆರ್ ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಹೊಸ ಮರ್ಸಿಡಿಸ್-ಎಎಂಜಿ ಜಿಟಿ-ಆರ್ ಕಾರಿನ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.2.48 ಕೋಟಿಗಳಿಂದ ಆರಂಭವಾಗುತ್ತದೆ.
ಹೊಸ ಎಎಂಜಿ ಜಿಟಿ-ಆರ್ ಕಾರಿನಲ್ಲಿ ಹಲವಾರು ಅಪ್‌ಡೇಟ್‌ಗಳನ್ನು ಮಾಡಲಾಗಿದೆ. ಹೊಸ ಮರ್ಸಿಡಿಸ್-ಎಎಂಜಿ ಜಿಟಿ-ಆರ್ ಕಾರು ಹಳೆಯ ತಲೆಮಾರಿನ ಕಾರಿನಂತೆ ಕಂಡು ಬಂದರೂ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಈ ಬದಲಾವಣೆಗಳಲ್ಲಿ ಎರಡೂ ತುದಿಯಲ್ಲಿರುವ ಕ್ಯಾನಾರ್ಡ್, ಪರಿಷ್ಕೃತ ಎಲ್‌ಇಡಿ ಹೆಡ್‌ಲ್ಯಾಂಪ್, ಪನಾಮೆರಿಕಾನಾ ಗ್ರಿಲ್ ಹಾಗೂ ಬ್ರೇಕ್ ಕೂಲಿಂಗ್ ಮೇಶರ್‌ಗಳು ಸೇರಿವೆ.
2020ರ ಮರ್ಸಿಡಿಸ್-ಎಎಂಜಿ ಜಿಟಿ-ಆರ್ ಕಾರಿನ ಹಿಂಭಾಗದ ಕಾರ್ಬನ್-ಫೈಬರ್ ವಿಂಗ್, ಎಎಂಜಿ ಪರ್ಫಾರ್ಮೆನ್ಸ್ ಎಕ್ಸಾಸ್ಟ್ ಸಿಸ್ಟಂ ಹಾಗೂ ಹಿಂಭಾಗದ ಬಂಪರ್‌ಗಳ ವಿನ್ಯಾಸವನ್ನು ಅಪ್‌ಡೇಟ್ ಮಾಡಲಾಗಿದೆ. ಈ ಕಾರಿನ ಎಕ್ಸ್‌ಟಿರಿಯರ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಅಪ್‌ಡೇಟ್ ಮಾಡಲಾಗಿದೆ.