Can Covid-19 Spread Through Takeaway Or Food? | Boldsky Kannada

2020-04-25 323

ಕೋವಿಡ್‌ 19 ಲಾಕ್‌ಡೌನ್‌ನಿಂದಾಗಿ ಜನರಿಗೆ ಒಂಥರಾ ಅಜ್ಞಾತವಾಸದಂಥ ಅನುಭವವಾಗಿದೆ. ಮಹಾಮಾರಿ ಕೊರೊನಾವೈರಸ್‌ಗೆ ಹೆದರಿ ಮನೆಯಿಂದ ಹೊರಗಡೆ ಹೋಗುವಂತೆ ಇಲ್ಲ, ಒಂದು ಸಲ ಲಾಕ್‌ಡೌನ್ ಓಪನ್ ಆದರೆ ತಮ್ಮ ಮೆಚ್ಚಿನ ರೆಸ್ಟೋರೆಂಟ್‌ಗೆ ಹೋಗಿ ಇಷ್ಟದ ಆಹಾರವನ್ನು ಸವಿಯಬೇಕೆಂದು ಸಾಕಷ್ಟು ಜನರು ಅಂದುಕೊಂಡಿರುತ್ತಾರೆ. ಆದರೆ ರೆಸ್ಟೋರೆಂಟ್‌ ಆಹಾರ ಮೂಲಕ ಎಲ್ಲಾದರೂ ರೋಗ ಹರಡುವ ಸಾಧ್ಯತೆ ಇದೆಯೇ ಎಂಬ ಭಯ ಜನರ ಮನಸ್ಸಿನಲ್ಲಿ ಇದ್ದೇ ಇದೆ. ಇತ್ತೀಚೆಗೆ ದೆಹಲಿಯಲ್ಲಿ ಪಿಜ್ಜಾ ಡೆಲಿವರಿ ಬಾಯ್‌ನಲ್ಲಿ ಸೋಂಕು ಪತ್ತೆಯಾದ ಬಳಿಕ ಜನರ ಮನಸ್ಸಿನಲ್ಲಿದ್ದ ಭಯ ಇನ್ನು ಸ್ವಲ್ಪ ಹೆಚ್ಚಾಗಿದೆ. ಕರ್ನಾಟಕದಲ್ಲಿ ಇಂದಿನಿಂದ ಲಾಕ್‌ಡೌನ್‌ನಲ್ಲಿ ಸ್ವಲ್ಪ ಸಡಲಿಕೆ ಮಾಡಲಾಗಿದೆ. ಹೋಟೆಲ್‌ ಊಟ ಸಿಗುವುದಾದರೂ ಅಲ್ಲೇ ತಿನ್ನುವಂತಿಲ್ಲ, ಪಾರ್ಸಲ್ ತಂದು ತಿನ್ನಬಹುದು. ಈ ಸೌಲಭ್ಯ ಎಷ್ಟೋ ಬ್ಯಾಚುಲರ್‌ಗಳಿಗೆ ವರದಾನವಾಗಿದೆ. ಆದರೆ ಆಹಾರದ ಮೂಲಕ ಕೊರೊನಾವೈರಸ್‌ ಹರಡಬಹುದೇ, ಹೊರಗಿನಿಂದ ಆಹಾರ ತರುವುದಾದರೆ ಏನಲ್ಲಾ ಮುನ್ನೆಚ್ಚರಿಕೆವಹಿಸಬೇಕು ಎಂಬುವುದರ ಬಗ್ಗೆ ಮಾಹಿತಿ ನೀಡಿದ್ದೇವೆ ನೋಡಿ: