ಮಂಡ್ಯದಲ್ಲಿ ಕೊರೊನ ಪರೀಕ್ಷೆ ವೇಳೆ ಪತ್ರಕರ್ತರ ಮೇಲೆ ಹಲ್ಲೆ , ಸಚಿವ ಡಾ. ನಾರಾಯಣಗೌಡ ಪ್ರತಿಕ್ರಿಯೆ

2020-04-25 4

ಪತ್ರಕರ್ತರ ಜೊತೆ ಸರ್ಕಾರ ಯಾವಾಗಲು ಇರುತ್ತೆ. ಪತ್ರಕರ್ತರು ಕೊರೊನಾ ಟೆಸ್ಟ್ ಮಾಡಿಸಲು ಸ್ವಯಂ ಪ್ರೇರಿತರಾಗಿ ಬಂದಿದ್ದಾರೆ. ಈ ಸಂದರ್ಭದಲ್ಲಿ ಕೆಲ ಕಿಡಿಗೇಡಿಗಳು ಗಲಾಟೆ ಮಾಡಿರುವ ವಿಚಾರ ಗೊತ್ತಾಗಿದೆ. ಮಂಡ್ಯ ಜಿಲ್ಲೆಯ ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಘಟನೆ ಬಗ್ಗೆ ಮಾಹಿತಿ ಪಡೆದಿದ್ದೇನೆ. ತಪ್ಪಿತಸ್ತರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ. ಪತ್ರಕರ್ತರು ಭಯಪಡುವ ಅಗತ್ಯ ಇಲ್ಲ. ಪತ್ರಕರ್ತರಿಗೆ ಕೊರೊನಾ ಟೆಸ್ಟ್ ಮಾಡಿಸಲು ಬೇಕಾಗ ಅಗತ್ಯ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಈ ರೀತಿ ಪತ್ರಕರ್ತರ ಮೇಲೆ ಗಲಾಟೆ ಮಾಡಲು ಮುಂದಾಗಿದ್ದು ತಪ್ಪು. ತಪ್ಪು ಮಾಡಿದವರ ವಿರುದ್ಧ ಕ್ರಮ ಖಂಡಿತ ಆಗತ್ತೆ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ. ನಾರಾಯಣಗೌಡ ತಿಳಿಸಿದ್ದಾರೆ.
Media people were attacked during corona test in Mandya and minister Dr. Narayana Gowda reacts to it

Videos similaires